ಉಳ್ಳಾಲ: ಆರೋಗ್ಯ ರಕ್ಷಣೆಗೆ ಜನಜಾಗೃತಿ ಹಾಗೂ ಉಚಿತ ಮಾಸ್ಕ್ ವಿತರಣೆ

Update: 2020-07-06 11:32 GMT

ಉಳ್ಳಾಲ: ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕಲ್ಲಾಪು, ಪಟ್ಲ, ಮುಡಿಪೋಡಿ ಪರಿಸರದಲ್ಲಿ ಆರೋಗ್ಯ ರಕ್ಷಣೆಗೆ ಜನಜಾಗೃತಿ ಹಾಗೂ ಉಚಿತ ಮಾಸ್ಕ್ ವಿತರಣಾ ಕಾರ್ಯಕ್ರಮ ಸೋಮವಾರ ನಡೆಯಿತು.

ಜಾಗತಿಕ ಮಹಾಮಾರಿ ಕೊರೋನ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಡೆಂಗಿ, ಮಲೇರಿಯಾ ಮುಂತಾದ ಸಾಂಕ್ರಾಮಿಕ ಪಿಡುಗುಗಳು ಬಾಧಿಸದೇ ಇರಲು ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಉತ್ತಮ ಎಂಬ ನಿಟ್ಟಿನಲ್ಲಿ ಇಂದು ನಗರ ಸಭಾ ಸದಸ್ಯರು (ಕೌನ್ಸಿಲರು)  ಮುಷ್ತಾಕ್ ಪಟ್ಲ ಇವರ ನೇತೃತ್ವದಲ್ಲಿ ‘ವಾರ್ಡ್ ವಾರಿಯರ್ಸ್’ ಸ್ಥಳೀಯ ಉತ್ಸಾಹಿ ತರುಣರ ಸಹಕಾರದೊಂದಿಗೆ ಪರಿಸರದ ಮನೆಮನೆಗೆ ಭೇಟಿ ನೀಡಿ, ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಮಾಸ್ಕ್ ಕಿಟ್ ವಿತರಿಸಿದರು.

ಆರೋಗ್ಯ ರಕ್ಷಣೆಗೆ ಉಪಯುಕ್ತ ಮಾಹಿತಿ, ಸಲಹೆಗಳೊಂದಿಗೆ ಜನಜಾಗೃತಿಯನ್ನು ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News