ಕೊರೋನ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ 14 ತಂಡಗಳ ರಚನೆ: ಉಡುಪಿ ಜಿಲ್ಲಾಧಿಕಾರಿ

Update: 2020-07-07 12:23 GMT

ಉಡುಪಿ, ಜು.7: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ಪರಿಣಾಮಕಾರಿಯಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯ ಸುರಕ್ಷತಾ ಕ್ರಮಗಳ ಕುರಿತು ಕಾರ್ಯನಿರ್ವಹಿಸುವುದಕಾಗಿ ಜಿಲ್ಲೆಯಲ್ಲಿ 14 ಕಾರ್ಯತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಈ ಎಲ್ಲಾ ತಂಡಗಳು ಸಂಘಟಿತವಾಗಿ, ಅತ್ಯಂತ ಸಮನ್ವಯ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಪ್ರತಿ ದಿನದ ವರದಿಯನ್ನು ತಮಗೆ ನೀಡುವಂತೆ ಜಿ.ಜಗದೀಶ್ ಆದೇಶಿಸಿದ್ದಾರೆ.

ತಂಡಗಳು: 1.ಕೋವಿಡ್-19 ಸೋಂಕಿತ ವ್ಯಕ್ತಿಗಳನ್ನು ಸಿಸಿಡಿ/ಡಿಸಿಎಚ್‌ಸಿ/ಡಿಸಿಎಚ್‌ಗಳಿಗೆ ಸ್ಥಳಾಂತರ

2.ಕೋವಿಡ್ ಆರೈಕೆ ಕೇಂದ್ರಗಳು (ಸಿಸಿಸಿ)

3. ಸಮರ್ಪಿತ ಕೋವಿಡ್-19 ಆರೋಗ್ಯ ಕೇಂದ್ರ, ಕೋವಿಡ್-19 ಆಸ್ವತ್ರೆಗಳು (ಡಿಸಿಎಚ್/ಡಿಸಿಎಚ್)

4.ಸಂಪರ್ಕ ಪತ್ತೆ ಹಚ್ಚುವಿಕೆ

5.ಪರೀಕ್ಷೆ

6. ಕಂಟೈನ್‌ಮೆಂಟ್ ವಲಯಗಳು

7.ಕ್ವಾರಂಟೈನ್ ನಿಗಾವಣಿ(ಹೋಂ ಕ್ವಾರಂಟೈನ್ -ಎಚ್ ಕ್ಯೂ) ಮತ್ತು ಸಿಕ್ಯೂಎಎಸ್ ಹಾಗೂ ಆರೋಗ್ಯ ಸೇತು(ಎಎಸ್).
8. ಸುರಕ್ಷಿತಾ ಅಂತರ (ಮುಖಗವಸು ಧರಿಸುವುದು, ಸಾಮಾಜಿಕ ಅಂತರ ಕಾಯುವುದು, ಬೃಹತ್ ಗುಂಪು ಗೂಡುವಿಕೆಯನ್ನು ತಡೆಯುವುದು, ಉಗಿಯುದನ್ನು ತಡೆಯುವುದು ಇತ್ಯಾದಿ)

9.ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಜ್ವರ ಚಿಕಿತ್ಸಾಲಯಗಳಿಂದ (ಕೆಪಿಎಂಇ ಮತ್ತು ಔಷದಿ ಕೇಂದ್ರಗಳು) ಐಎಲ್‌ಐ/ಎಸ್‌ಎಅರ್‌ಐ ಪ್ರಕರಣಗಳು

10.ಜಿಲ್ಲಾ ನಿಯಂತ್ರಣ ಕೊಠಡಿ(ಆರೋಗ್ಯ ಪೊಲೀಸ್ ಮತ್ತು ಕಂದಾಯ).

11. ಮೃತದೇಹದ ನಿರ್ವಹಣೆ

12. ರಸ್ತೆ ಮತ್ತು ರೈಲಿನ ಮೂಲಕ ಅಂತರ್ ರಾಜ್ಯ ಪ್ರಯಾಣಿಕರು (ಅಂತರ್ ರಾಜ್ಯ ಗಡಿಯನ್ನು ಹಂಚಿಕೊಳ್ಳುವ ಜಿಲ್ಲೆಗಳಿಗೆ ಮತ್ತು ಪ್ರಮುಖವಾದ ರೈಲ್ವೆ ನಿಲ್ದಾಣ ಹೊಂದಿರುವ ಜಿಲ್ಲೆಗಳಿಗೆ)

13. ವಿಮಾನಯಾನ ಮತ್ತು ನೌಕಯಾನದ ಮೂಲಕ ಪ್ರಯಾಣಿಸುವ ಅಂತರ್ ರಾಜ್ಯ ಪ್ರಯಾಣಿಕರು (ವಿಮಾನ ನಿಲ್ದಾಣ ಮತ್ತು ಹಡಗು ನಿಲ್ದಾಣಗಳನ್ನು ಹೊಂದಿರುವ ದಕ್ಷಿಣ ಕನ್ನಡ ಮತ್ತು ಇತರ ಜಿಲ್ಲೆಗಳು)

14.ಮಾತೃ ಮತ್ತು ಮಗುವಿನ ಆರೋಗ್ಯ ಸೇವಾ ಕಾರ್ಯಕ್ರಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News