ದ.ಕ.ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 83 ಮಂದಿಗೆ ಕೊರೋನ ಪಾಸಿಟಿವ್

Update: 2020-07-07 14:57 GMT

ಮಂಗಳೂರು, ಜು.7: ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಮಂಗಳವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ ವರದಿಗಳ ಪೈಕಿ 83 ಪಾಸಿಟಿವ್ ಬಂದಿವೆ. ಅಲ್ಲದೆ 65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 26ಕ್ಕೇರಿದೆ.

ಪಾಸಿಟಿವ್‌ ಬಂದ 83 ಮಂದಿಯ ಪೈಕಿ 48 ಮಂದಿಗೆ ಪ್ರಾಥಮಿಕ ಸಂಪರ್ಕ ಮತ್ತು ಇಬ್ಬರಿಗೆ ದ್ವಿತೀಯ ಸಂಪರ್ಕ ಹಾಗೂ 20 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ, ಇಬ್ಬರಿಗೆ ಚಿಕ್ಕಮಗಳೂರಿಗೆ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ಕೊರೋನ ದೃಢಪಟ್ಟಿದೆ. 3 ಮಂದಿಗೆ ರ್ಯಾಂಡಮ್ ಪರೀಕ್ಷೆ ವೇಳೆ, 3 ಮಂದಿಗೆ ಶಸಚಿಕಿತ್ಸೆಗೂ ಮುನ್ನ ಪರೀಕ್ಷಿಸಿದಾಗ ಮತ್ತು ಓರ್ವರಿಗೆ ಹೆರಿಗೆಗೂ ಮುನ್ನ ಪರೀಕ್ಷಿಸಿದಾಗ ಕೊರೋನ ದೃಢಪಟ್ಟಿದೆ. 3 ಮಂದಿಯ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. 11 ತಿಂಗಳ ಗಂಡು ಮಗು ಮತ್ತು 88 ವರ್ಷದ ವೃದ್ಧೆಗೂ ಸೋಂಕು ದೃಢಗೊಂಡಿವೆ.

ದ.ಕ.ಜಿಲ್ಲೆಯ 20,89,699 ಮಂದಿಯ ಪೈಕಿ 21,881 ಮಂದಿಯ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಈವರೆಗೆ 21,395 ಮಂದಿಯ ವರದಿ ಬಂದಿದ್ದು, 20,036 ಮಂದಿಯ ವರದಿಯು ನೆಗೆಟಿವ್ ಆಗಿದೆ. 1,359 ಮಂದಿಯ ವರದಿಯು ಪಾಸಿಟಿವ್ ಬಂದಿದೆ. ಕೊರೋನ ಸೋಂಕಿಗೊಳಗಾಗಿದ್ದ 99 ಮಂದಿ ಮಂಗಳವಾರ ಬಿಡುಗಡೆಯಾಗಿದ್ದು, ಇದರೊಂದಿಗೆ ಈವರೆಗೆ 683 ಮಂದಿ ಬಿಡುಗಡೆ ಹೊಂದಿದಂತಾಗಿದೆ. 650 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಮೂರು ಮಂದಿ ವೆನ್ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News