ಪುತ್ತೂರು: ಬಾರೀ ಮಳೆಗೆ ಚೆಲ್ಯಡ್ಕ ಸೇತುವೆ ಮುಳುಗಡೆ

Update: 2020-07-07 15:09 GMT

ಪುತ್ತೂರು: ಕಳೆದ 3 ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಮಂಗಳವಾರ ಸಂಜೆಯ ವೇಳೆಗೆ ಪುತ್ತೂರು-ಪಾಣಾಜೆ ಸಂಪರ್ಕದ ಚೆಲ್ಯಡ್ಕ ಸೇತುವೆ ಮುಳುಗಡೆಯಾಗಿದೆ. 

ಈ ಭಾಗದಲ್ಲಿ ಸಂಚರಿಸುವ ವಾಹನಗಳು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸಾಗಿ ಸಂಟ್ಯಾರು ಎಂಬಲ್ಲಿ ತಿರುವು ಪಡೆದುಕೊಂಡು ರೆಂಜದ ಮೂಲಕ ಪಾಣಾಜೆಗೆ ಸಾಗುತ್ತಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಎತ್ತರ ಕಿರಿದಾಗಿರುವ ಚೆಲ್ಯಡ್ಕ ಸೇತುವೆಯು ಪ್ರತಿ ಮಳೆಗಾಲದಲ್ಲಿ ಕನಿಷ್ಠ ನಾಲ್ಕೈದು ಬಾರಿ ಮುಳುಗಡೆಯಾಗುತ್ತಿದೆ. ಇಲ್ಲೊಂದು ಎತ್ತರದ ಸೇತುವೆ ನಿರ್ಮಾಣಕ್ಕೆ ಈ ಭಾಗದ ಜನರು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಈ ತನಕ ಸೇತುವೆ ನಿರ್ಮಾಣ ಕಾರ್ಯ ನಡೆದಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News