ದ.ಕ. ಜಿಲ್ಲಾದ್ಯಂತ ಭಾರೀ ಮಳೆ

Update: 2020-07-07 15:17 GMT

ಮಂಗಳೂರು, ಜು.7: ದ.ಕ ಜಿಲ್ಲೆಯಲ್ಲಿ ಮಂಗಳವಾರ ಮಳೆಯಬ್ಬರ ಮತ್ತೆ ಹೆಚ್ಚಾಗಿದ್ದು, ದಿನವಿಡೀ ಮೋಡ ಕವಿದ ವಾತಾವರಣದ ಮಧ್ಯೆ ಭಾರೀ ಮಳೆಯಾಗಿದೆ. ಮಂಗಳೂರು, ಪುತ್ತೂರು ಮತ್ತು ಸುಳ್ಯ ತಾಲೂಕಿನ ವಿವಿಧೆಡೆ ಮಳೆ ಬಿರುಸು ಪಡೆದಿತ್ತು.

ರಾಜ್ಯ ಹವಾಮಾನ ಇಲಾಖೆಯು ಕರಾವಳಿ ತೀರದಲ್ಲಿ ಇನ್ನೂ ಕೆಲವುದಿನ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಬುಧವಾರವೂ ನಿರಂತರವಾಗಿ ಮಳೆ ಸುರಿಯುವ ಸಾಧ್ಯತೆಯಿದೆ.

ಮಂಗಳವಾರ ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸಿದೆ. ಅದು ಬುಧವಾರವೂ ಮುಂದುವರಿಯಲಿದ್ದು, ಸಮುದ್ರದಿಂದ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜತೆಗೆ ಅಲೆಗಳ ಅಬ್ಬರವೂ ಹೆಚ್ಚಾಗಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮಂಗಳವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 39.6 ಮಿ.ಮೀ. ಮಳೆ ಸುರಿದಿದೆ. ಬಂಟ್ವಾಳದಲ್ಲಿ 32.6 ಮಿ.ಮೀ, ಬೆಳ್ತಂಗಡಿಯಲ್ಲಿ 44.7 ಮಿ.ಮೀ, ಮಂಗಳೂರಿನಲ್ಲಿ 21.4 ಮಿ.ಮೀ., ಪುತ್ತೂರಿನಲ್ಲಿ 69.1ಮಿ.ಮೀ ಮತ್ತು ಸುಳ್ಯದಲ್ಲಿ 30.1 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News