ಉಡುಪಿ: ಖಾಸಗಿ ಆಸ್ಪತ್ರೆ ನರ್ಸ್ ಡೆಂಗಿ‌ಗೆ ಬಲಿ

Update: 2020-07-07 16:30 GMT

ಉಡುಪಿ, ಜು.7: ಕೊರೋನ ಅಟ್ಟಹಾಸದ ಮಧ್ಯೆ ಉಡುಪಿಯ ಖಾಸಗಿ ಆಸ್ಪತ್ರೆಯ ನರ್ಸ್ ಒಬ್ಬರು ಡೆಂಗಿ‌ ಜ್ವರಕ್ಕೆ ಬಲಿಯಾಗಿರುವ ಘಟನೆ ಜು.6 ರಂದು ರಾತ್ರಿ ವೇಳೆ ನಡೆದಿದೆ.

ಬೆಳ್ಮಣ್ ನಿವಾಸಿಯಾಗಿರುವ 23 ಹರೆಯದ ಈಕೆ, ಉಡುಪಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ಕೆಲವು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ನಿನ್ನೆ ರಾತ್ರಿ ಜ್ವರ ಉಲ್ಬಣಗೊಂಡು ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈಕೆಯನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಪಾಸಿಟಿವ್ ಎಂಬುದಾಗಿ ಬಂದಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News