ಮನೆ ಸೀಲ್‌ಡೌನ್: ಹೊರಗಡೆ ಹೋಗಲು ಬಿಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ

Update: 2020-07-07 16:59 GMT
ಸಾಂದರ್ಭಿಕ ಚಿತ್ರ

ಕೋಟ, ಜು.7: ಕೋವಿಡ್-19ಕ್ಕೆ ಸಂಬಂಧಿಸಿ ಕಂಟೈನ್‌ಮೆಂಟ್ ವಲಯವಾಗಿ ಘೋಷಿಸಿದ್ದ ಮನೆಯಿಂದ ಹೊರಗಡೆ ಹೋಗಲು ಬಿಡಲಿಲ್ಲ ಎಂಬ ಕಾರಣಕ್ಕಾಗಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.6ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ರುದ್ರ ಎಂಬವರ ಮಗ ಕಾರ್ತಿಕ್(15) ಎಂದು ಗುರುತಿಸಲಾಗಿದೆ. ರುದ್ರ ಕೆಲಸಕ್ಕೆ ಹೋಗುವ ಮನೆಯಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ, ರುದ್ರ ಅವರ ಮನೆಯನ್ನು ಕಂಟೈನ್‌ಮೆಂಟ್ ವಲಯವನ್ನಾಗಿ ಘೋಷಿಸಲಾಗಿತ್ತು.

ಕಂಟೈನ್‌ಮೆಂಟ್ ವಲಯ ಆಗಿರುವುದರಿಂದ ಇಲ್ಲಿಂದ ಯಾರು ಹೊರಗಡೆ ಹೋಗಲು ಅವಕಾಶ ಇರುವುದಿಲ್ಲ. ಇದೇ ವಿಚಾರದಲ್ಲಿ ಮನನೊಂದ ಕಾರ್ತಿಕ್, ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News