ಉಳ್ಳಾಲ: ಮಂಗಳವಾರ 15 ಮಂದಿಗೆ ಕೊರೋನ ಪಾಸಿಟಿವ್

Update: 2020-07-07 17:17 GMT

ಉಳ್ಳಾಲ,ಜು.07: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ 3, ಬಾಳೆಪುಣಿಯಲ್ಲಿ 2, ದೇರಳಕಟ್ಟೆ 5, ಬೆಳ್ಮ1, ಕುತ್ತಾರ್ 1, ಕೋಟೆಕಾರ್ ನಲ್ಲಿ 3 ಸೇರಿದಂತೆ ಒಟ್ಟು 15 ಮಂದಿಗೆ ಕೊರೊನ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಉಳ್ಳಾಲದಲ್ಲಿ 23, 54, 46 ವರ್ಷದ ಮೂವರು ಪುರುಷರು, ಕೋಟೆಕಾರು ಪ.ಪಂ.ವ್ಯಾಪ್ತಿಯ ಕೊಂಡಾಣದಲ್ಲಿ 35 ವರ್ಷದ ಪುರುಷ, ಬಗಂಬಿಲದಲ್ಲಿ 52 ವರ್ಷದ ಪುರುಷ, ಮಡ್ಯಾರ್ ನ 47 ವರ್ಷದ ಪುರುಷ, ಕುತ್ತಾರ್ ನಿವಾಸಿ 24 ವರ್ಷದ ಯುವಕ, ದೇರಳಕಟ್ಟೆ ವ್ಯಾಪ್ತಿಯಲ್ಲಿ 27 ವರ್ಷದ ಮೂವರು ಮಹಿಳೆಯರು ಹಾಗೂ 26ವರ್ಷದ ಪುರುಷ ಕೊರೊನ ಸೋಂಕು ದೃಢಪಟ್ಟಿದೆ

ಉಳ್ಳಾಲದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News