ಬ್ಯಾರಿ ಅಕಾಡಮಿ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

Update: 2020-07-07 18:36 GMT

ಮಂಗಳೂರು, ಜು.7: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು 2019ರ ಪುಸ್ತಕ ಬಹುಮಾನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಲೇಖಕರು ಅಥವಾ ಪ್ರಕಾಶಕರು ಅರ್ಜಿ ಸಲ್ಲಿಸಬಹುದಾಗಿದೆ.

1-1-2019ರಿಂದ 31-12-2019ರವರೆಗೆ ಪ್ರಕಟಗೊಂಡ ಬ್ಯಾರಿ ಕವನ ಸಂಕಲನ, ಬ್ಯಾರಿ ಕಥಾ ಸಂಕಲನ, ಬ್ಯಾರಿ ಕಾದಂಬರಿ, ಬ್ಯಾರಿ ಕಾವ್ಯ, ಬ್ಯಾರಿ ನಾಟಕ, ಬ್ಯಾರಿ ಬಗ್ಗೆ ಅಧ್ಯಯನ ಗ್ರಂಥ ಹಾಗೂ ಬ್ಯಾರಿಯಿಂದ ಇತರ ಭಾಷೆಗೆ - ಇತರ ಭಾಷೆಯಿಂದ ಬ್ಯಾರಿಗೆ ಭಾಷಾಂತರಿತ ಕೃತಿಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದು. ಈ ಪ್ರಕಾರಗಳಲ್ಲಿ ಅಕಾಡಮಿಯು ಅಧಿಕ ಸಂಖ್ಯೆಯಲ್ಲಿ ಸ್ವೀಕರಿಸುವ ಪುಸ್ತಕಗಳ ಪೈಕಿ 3 ಪ್ರಕಾರಗಳನ್ನು ಮಾತ್ರ ಪುಸ್ತಕ ಬಹುಮಾನಕ್ಕೆ ಪರಿಗಣಿಸಲಾಗುವುದು. ಪುಸ್ತಕಗಳ ತಲಾ 4 ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ಬ್ಯಾರಿ ಅಕಾಡಮಿ ಪುಸ್ತಕ ಬಹುಮಾನ ಯೋಜನೆ-2019 ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್ಟಡ, ಮಿನಿ ಧಾನಸೌಧದ ಬಳಿ, ಮಂಗಳೂರು 575001 ಈ ವಿಳಾಸಕ್ಕೆ ದಿನಾಂಕ ಜು.31ರೊಳಗೆ ಸಲ್ಲಿಸುವಂತೆ ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News