ನೇಪಾಳದ ಆಂತರಿಕ ವ್ಯವಹಾರದಲ್ಲಿ ಚೀನಾದ ಹಸ್ತಕ್ಷೇಪ: ರಾಜಕೀಯ ನಾಯಕರಿಂದ ಟೀಕೆ

Update: 2020-07-08 17:08 GMT

ಆಡಳಿತಾರೂಢ ಪಕ್ಷದ ನಾಯಕರ ಜೊತೆಗೆ ಚೀನಾ ರಾಯಭಾರಿ ನಡೆಸುತ್ತಿರುವ ಸರಣಿ ಸಭೆಗಳು ನೇಪಾಳದ ಆಂತರಿಕ ರಾಯಕೀಯ ವ್ಯವಹಾರದಲ್ಲಿ ಚೀನಾ ಮಾಡುತ್ತಿರುವ ಹಸ್ತಕ್ಷೇಪವಾಗಿದೆ ಎಂದು ಹಲವಾರು ರಾಜಕೀಯ ಪಕ್ಷಗಳ ನಾಯಕರು ಬಣ್ಣಿಸಿದ್ದಾರೆ.

‘‘ರಿಮೋಟ್ ಕಂಟ್ರೋಲ್ ಮೂಲಕ ನಡೆಸಲ್ಪಡುತ್ತಿರುವ ಡೆಮಾಕ್ರಟಿಕ್ ರಿಪಬ್ಲಿಕ್ ನಿಂದ ನೇಪಾಳ ಜನರಿಗೆ ಏನಾದರೂ ಪ್ರಯೋಜನವಿದೆಯೇ?’’ ಎಂದು ಮಾಜಿ ವಿದೇಶ ಸಚಿವ ಹಾಗೂ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಅಧ್ಯಕ್ಷ ಕಮಲ ಥಾಪ ಟ್ವೀಟ್ ಮಾಡಿದ್ದಾರೆ.

‘‘ನೇಪಾಳ ಸಾರ್ವಭೌಮ ರಾಷ್ಟ್ರವಾಗಿ ತನ್ನ ನಿರ್ಧಾರವನ್ನು ತಾನೇ ತೆಗೆದುಕೊಳ್ಳಲು ಸಮರ್ಥವಿದೆ. ನಮ್ಮ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಯುವುದನ್ನು ನಾನು ವಿರೋಧಿಸುತ್ತೇವೆ ಮತ್ತು ತಿರಸ್ಕರಿಸುತ್ತೇವೆ’’ ಎಂದು ಸಿಪಿಎನ್ ಪಕ್ಷದ ವಕ್ತಾರ ನಾರಾಯಣ್ಕಜಿ ಶ್ರೇಷ್ಠ ಟ್ವೀಟ್ ಮಾಡಿದ್ದಾರೆ.

ಅಪ್ರಬುದ್ಧ ವಿದೇಶ ನೀತಿ: ಪ್ರತಿಪಕ್ಷಗಳ ಟೀಕೆ

ನೇಪಾಳದ ಕೆ.ಪಿ. ಒಲಿ ಸರಕಾರದ ‘ಅಪ್ರಬುದ್ಧ’ ವಿದೇಶ ನೀತಿಯನ್ನು ದೇಶದ ಪ್ರತಿಪಕ್ಷಗಳು ಮಂಗಳವಾರ ಟೀಕಿಸಿವೆ ಹಾಗೂ ಅದು ನೆರೆ ದೇಶಗಳೊಂದಿಗಿನ ನೇಪಾಳದ ಸಂಬಂಧವನ್ನು ಹಾಳುಮಾಡಿವೆ ಎಂದು ಆರೋಪಿಸಿವೆ.

ಕಳೆದ ತಿಂಗಳು, ಭಾರತೀಯ ಸ್ಥಳಗಳಾದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಗಳನ್ನು ನೇಪಾಳಕ್ಕೆ ಸೇರಿಸಿ ದೇಶದ ನಕಾಶೆಯನ್ನು ಪರಿಷ್ಕರಿಸಿದ ಬಳಿಕ ಪ್ರಧಾನಿ ಒಲಿ ಭಾರೀ ಟೀಕೆಯನ್ನು ಎದುರಿಸುತ್ತಿದ್ದಾರೆ.

ಒಲಿ ಸರಕಾರವು ಅತ್ಯಂತ ಅಸಮತೋಲಿತ ಹಾಗೂ ಬೇಜವಾಬ್ದಾರಿಯುತ ವಿದೇಶ ನೀತಿಯನ್ನು ಅನುಸರಿಸುತ್ತಿದೆ ಹಾಗೂ ಇದು ನೆರೆ ದೇಶಗಳೊಂದಿಗಿನ ಸಂಬಂಧಕ್ಕೆ ಕುತ್ತು ತಂದಿದೆ ಎಂಬುದಾಗಿ ಮಂಗಳವಾರ ನಡೆದ ಪ್ರತಿಪಕ್ಷಗಳ ಸಭೆ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News