ಕ್ರಿಮಿನಲ್ ಕಾನೂನು ಸುಧಾರಣೆ ಸಮಿತಿಯಲ್ಲಿ ವೈವಿಧ್ಯತೆಯ ಕೊರತೆ: ನಿವೃತ್ತ ನ್ಯಾಯಾಧೀಶರ ಪತ್ರ

Update: 2020-07-08 17:17 GMT

ಹೊಸದಿಲ್ಲಿ, ಜು.8: ಕ್ರಿಮಿನಲ್ ಕಾನೂನುಗಳಲ್ಲಿ ಸುಧಾರಣೆಯ ನಿಟ್ಟಿನಲ್ಲಿ ನೂತನವಾಗಿ ರಚಿಸಲಾಗಿರುವ ತಜ್ಞರ ಸಮಿತಿಯಲ್ಲಿ ವೈವಿಧ್ಯತೆಯ ಕೊರತೆಯಿದ್ದು, ಸಮಿತಿಯ ಕಾರ್ಯನಿರ್ವಹಣೆಯಲ್ಲಿ ಇನ್ನಷ್ಟು ಹೆಚ್ಚಿನ ಪಾರದರ್ಶಕತೆಯ ಅಗತ್ಯವಿದೆ ಎಂದು ನಿವೃತ್ತ ನ್ಯಾಯಾಧೀಶರು, ನಿವೃತ್ತ ಅಧಿಕಾರಿಗಳ ತಂಡ ಅಭಿಪ್ರಾಯ ಸೂಚಿಸಿ ಸಮಿತಿಗೆ ಪತ್ರ ಬರೆದಿದೆ.

2019ರ ಡಿಸೆಂಬರ್ ನಲ್ಲಿ ಗೃಹ ಸಚಿವ ಅಮಿತ್ ಶಾ ಮೊದಲ ಬಾರಿಗೆ ಸಮಿತಿಯ ಬಗ್ಗೆ ಘೋಷಣೆ ಮಾಡಿದ್ದರು. ಗುಂಪಿನಿಂದ ಥಳಿತದ ಘಟನೆಗಳನ್ನು ನಿರ್ವಹಿಸಲು ಭಾರತೀಯ ದಂಡ ಸಂಹಿತೆ ಮತ್ತು ದಂಡ ಪ್ರಕ್ರಿಯಾ ಸಂಹಿತೆಗೆ ಅಗತ್ಯದ ತಿದ್ದುಪಡಿ ತರುವ ಬಗ್ಗೆ ತಜ್ಞರ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಶಾ ಹೇಳಿದ್ದರು.

 2020ರ ಮೇ 4ರಂದು ಗೃಹ ಇಲಾಖೆ ಅಧಿಸೂಚನೆಯ ಮೂಲಕ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಅಧ್ಯಕ್ಷರಾಗಿ ದಿಲ್ಲಿಯ ನ್ಯಾಷನಲ್ ಲಾ ವಿವಿಯ ಕುಲಪತಿ ರಣಬೀರ್ ಸಿಂಗ್, ಸದಸ್ಯರಾಗಿ ವಿವಿಯ ರಿಜಿಸ್ಟ್ರಾರ್ ಜಿಎಸ್ ಬಾಜ್ಪಾಯಿ, ವಿವಿಯ ಪ್ರೊಫೆಸರ್ ಮೃಣಾಲ್ ಸತೀಶ್, ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಮಹೇಶ್ ಜೇಠ್ಮಲಾನಿ, ದಿಲ್ಲಿಯ ಮಾಜಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿಪಿ ಥರೇಜಾರನ್ನು ನೇಮಕ ಮಾಡಲಾಗಿದೆ. ಈ ಸಮಿತಿಯು ಸಾರ್ವಜನಿಕರ ಸಮಾಲೋಚನೆಗೆ 19 ಪ್ರಶ್ನೆಗಳ ಪ್ರಶ್ನಾವಳಿಯನ್ನು ಬಿಡುಗಡೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News