ಟೆಸ್ಟ್ ಪಂದ್ಯಕ್ಕೂ ಮುನ್ನ ಮಂಡಿಯೂರಿದ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಆಟಗಾರರು

Update: 2020-07-08 18:05 GMT

ಹೊಸದಿಲ್ಲಿ: ವರ್ಣ ತಾರತಮ್ಯವನ್ನು ವಿರೋಧಿಸಿ ನಡೆದ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಇಂದು ಸೌತ್ಯಾಂಪ್ಟನ್ ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ಆಟಗಾರರು ಮಂಡಿಯೂರಿ ಕುಳಿತರು.

4 ತಿಂಗಳುಗಳ ನಂತರ ನಡೆಯುತ್ತಿರುವ ಪ್ರಥಮ ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ.

3 ಪಂದ್ಯಗಳ ಟೆಸ್ಟ್ ಟೂರ್ನಿಯ ಮೊದಲ ಪಂದ್ಯದ ವೇಳೆ ಕ್ರೀಡಾಂಗಣಕ್ಕೆ ಆಗಮಿಸಿದ ಎರಡೂ ತಂಡಗಳ ಸದಸ್ಯರು ಪಂದ್ಯ ಆರಂಭಕ್ಕೂ ಮುನ್ನ ಮೊಣಕಾಲೂರಿ ಕುಳಿತರು. ಇಷ್ಟೇ ಅಲ್ಲದೆ ಆಟಗಾರರು ತಮ್ಮ ಅಂಗಿಯ ಕಾಲರ್ ನಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಲೋಗೊವನ್ನು ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News