ಸ್ಲೊವೇನಿಯಾದಲ್ಲಿ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

Update: 2020-07-09 05:44 GMT

ವಾಷಿಂಗ್ಟನ್, ಜು.9: ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಅವರ ಮರದ ಪ್ರತಿಮೆಗೆ ಬೆಂಕಿ ಹಚ್ಚಿ ವಿರೂಪಗೊಳಿಸಿರುವ ಘಟನೆ ತಡವಾಗಿ ವರದಿಯಾಗಿದೆ.

 ಮೆಲನಿಯಾ ಟ್ರಂಪ್ ಅವರ ಹುಟ್ಟೂರು ಸ್ಲೊವೇನಿಯಾದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಜುಲೈ 4ರ ರಾತ್ರಿ ಈ ಘಟನೆ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಮೆರಿಕದ ಸ್ವಾತಂತ್ರದ ದಿನಾಚರಣೆಯಂದೇ(ಜು.4)ಪ್ರತಿಮೆಗೆ ಬೆಂಕಿ ಹಚ್ಚಲಾಗಿದೆ.

ಪೊಲೀಸರು ಮಾಹಿತಿ ನೀಡಿದ ಕೂಡಲೇ ವಿರೂಪಗೊಂಡಿದ್ದ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ ಎಂದು ಪ್ರತಿಮೆಯನ್ನು ನಿರ್ಮಿಸಿರುವ ಜರ್ಮನಿ ಮೂಲದ ಅಮೆರಿಕ ಕಲಾವಿದ ಬ್ರಾಡ್ ಡೌನಿ ತಿಳಿಸಿದ್ದಾರೆ.

"ಪ್ರತಿಮೆಯನ್ನು ಯಾಕೆ ವಿರೂಪಗೊಳಿಸಿದರು ಎಂದು ಕೇಳಬಯಸುತ್ತೇನೆ. ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಕಿಡಿಯನ್ನು ಶಮನಗೊಳೀಸಲು ತ್ವರಿತವಾಗಿ ಮಾತುಕತೆನಡೆಸಲು ಇದು ಸಕಾಲ. ವಲಸಿಗರ ಪ್ರತಿನಿಧಿಯಾಗಿರುವ ಮೆಲನಿಯಾ ಟ್ರಂಪ್ ಅವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಸರಿಯಲ್ಲ'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News