ಕೀಳಡಿ ಪುರಾತತ್ವ ಸ್ಥಳದಲ್ಲಿ ಎರಡು ಮಕ್ಕಳ ಅಸ್ಥಿಪಂಜರಗಳು ಪತ್ತೆ

Update: 2020-07-09 12:14 GMT

ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕೀಳಡಿ ಪುರಾತತ್ವ ಸ್ಥಳದ ಆರನೇ ಹಂತದ ಉತ್ಖನನದ ವೇಳೆ ಪತ್ತೆಯಾದ ಮಕ್ಕಳ ಎರಡು ಅಸ್ಥಿಪಂಜರಗಳನ್ನು ಹೆಚ್ಚಿನ ತಪಾಸಣೆಗೆ ಮಧುರೈ ಕಾಮರಾಜ್ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ.

ಒಂದು ಮಗುವಿನ ಅಸ್ಥಿಪಂಜರ ಇತ್ತೀಚೆಗೆ ಪತ್ತೆಯಾಗಿದ್ದು, 95 ಸೆಂ.ಮೀ. ಉದ್ದವಿದ್ದರೆ, ಇನ್ನೊಂದು ಅಸ್ಥಿಪಂಜರ ಕಳೆದ ತಿಂಗಳು ಪತ್ತೆಯಾಗಿತ್ತು. ಅದು 75 ಸೆಂ.ಮೀ ಉದ್ದವಿತ್ತು.  ಎರಡೂ ಹತ್ತಿರ ಹತ್ತಿರದಲ್ಲಿಯೇ ಪತ್ತೆಯಾಗಿದ್ದವು ಎಂದು ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೇಶಕ ಆರ್ ಶಿವಾನಂದಂ ಹೇಳಿದ್ದಾರೆ. ಮಕ್ಕಳ ವಯಸ್ಸು, ಲಿಂಗ ಮತ್ತಿತರ ಮಾಹಿತಿಗಳನ್ನು ತಜ್ಞರು ಪರಾಮರ್ಶಿಸಲಿದ್ದಾರೆ. ಕೀಳಡಿಯಲ್ಲಿ ಪತ್ತೆಯಾದ ಸಾಂಸ್ಕೃತಿಕ ಪಳೆಯುಳಿಕೆಗಳು ಕ್ರಿಸ್ತಪೂರ್ವ ಆರನೇ  ಶತಮಾನ ಹಾಗೂ ಒಂದನೇ ಶತಮಾನದ ನಡುವಿನ ಅವಧಿಯದ್ದಾಗಿರಬಹುದು ಎಂದು ಅವರು ಹೇಳಿದ್ದಾರೆ.

ಆರನೇ ಹಂತದ ಉತ್ಖನನ ಫೆಬ್ರವರಿ ತಿಂಗಳಲ್ಲಿ ಕೊಂತಗೈ, ಅಗರಮ್ ಹಾಗೂ ಮಣಲೂರು ಗ್ರಾಮಗಳಲ್ಲಿ  ಆರಂಭಗೊಂಡಿತ್ತು. ಇದಕ್ಕಾಗಿ ರೂ 40 ಲಕ್ಷ ಮೀಸಲಿರಿಸಲಾಗಿದೆ. ಇಲ್ಲಿಯ ತನಕದ ಉತ್ಖನನದಿಂದ ಕೀಳಡಿಯು 2,600 ವರ್ಷಗಳಷ್ಟು ಹಿಂದಿನ ಸಂಗಮಯುಗದ ಜಗತ್ತಿನ ಅತ್ಯಂತ ಹಳೆಯ ನಗರ ಪ್ರದೇಶದ ನಾಗರಿಕತೆ ಎಂಬುದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News