ಪುತ್ತೂರಿನಲ್ಲಿ 5 ಮಂದಿಗೆ ಕೊರೋನ ಸೋಂಕು ದೃಢ

Update: 2020-07-10 07:44 GMT

ಪುತ್ತೂರು, ಜು.10: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಶುಕ್ರವಾರ 5 ಕೊರೋನ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಈ ಎರಡು ತಾಲೂಕುಗಳಲ್ಲಿ ಈ ತನಕ ಒಟ್ಟು 33 ಕೊರೋನ ಪ್ರಕರಣಗಳು ಪತ್ತೆಯಾಗಿವೆ. 

ಪುತ್ತೂರು ನಗರಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ 69 ವರ್ಷ ವಯಸ್ಸಿನ ವೃದ್ಧರೊಬ್ಬರಲ್ಲಿ ಕೊರೋನ ದೃಢಪಟ್ಟಿದೆ. ಇವರು ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇವರ ಗಂಟಲು ದ್ರವ ಪರೀಕ್ಷಾ ವರದಿ ಶುಕ್ರವಾರ ಪಾಸಿಟಿವ್ ಬಂದಿದೆ. ಕಾವು ಅಮ್ಚಿನಡ್ಕ ಕಾಲನಿಯ 26 ವರ್ಷ ವಯಸ್ಸಿನ ಯುವಕನಲ್ಲಿ ಕೊರೋನ ದೃಢ ಪಟ್ಟಿದೆ. ಈತ ವಾಸಿಸುವ ಕಾಲನಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ತಪಾಸಣೆ ನಡೆಸಿ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಶುಕ್ರವಾರ ಕೊರೋನ ಪಾಸಿಟಿವ್ ಬಂದಿದೆ. ಇವರಿಬ್ಬರನ್ನು ಮಂಗಳೂರು ಕೋವಿಡ್ ವೆನ್‍ಲಾಕ್ ಆಸ್ಪತ್ರೆಗೆ ಆರೋಗ್ಯ ಇಲಾಖೆಯು ಸ್ಥಳಾಂತರಿಸಿದೆ. ಇವರಿಬ್ಬರ ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ. 

ನಗರಸಭಾ ವ್ಯಾಪ್ತಿಯ ಪರ್ಲಡ್ಕ ಗೋಳಿಕಟ್ಟೆಯ ಯುವಕನಲ್ಲಿ ಶುಕ್ರವಾರ ಕೊರೋನ ದೃಢಪಟ್ಟಿದೆ. ಈ ಯುವಕ ವಿದೇಶದಿಂದ ಆಗಮಿಸಿ ಮಂಗಳೂರಿನಲ್ಲಿ ಕಾರಂಟೈನ್‍ನಲ್ಲಿ ಇದ್ದರು. ಇವರ ಗಂಟಲು ದ್ರವ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

2 ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ಸಿಬಂದಿ ಕುಟ್ರುಪ್ಪಾಡಿ ನಿವಾಸಿಗೆ ಕೊರೋನ ದೃಢ ಪಟ್ಟಿತ್ತು. ಇದೀಗ ರೋಗಿಯ ಪತ್ನಿ ಮತ್ತು ಪುತ್ರಿಗೆ ಕೊರೋನ ದೃಢ ಪಟ್ಟಿದೆ. ಇವರು ಈಗಾಗಲೇ ಮಂಗಳೂರು ಕೋವಿಡ್ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News