ಉಡುಪಿಯಲ್ಲಿ 58 ಮಿ.ಮೀ. ಮಳೆ

Update: 2020-07-10 12:08 GMT
ಸಾಂದರ್ಭಿಕ ಚಿತ್ರ

ಉಡುಪಿ, ಜು.10: ಉಡುಪಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಸರಾಸರಿ 58 ಮಿ.ಮೀ.ಮಳೆಯಾಗಿದೆ. ಉಡುಪಿಯಲ್ಲಿ 64ಮಿ.ಮೀ., ಕುಂದಾಪುರದಲ್ಲಿ 83 ಮಿ.ಮೀ. ಹಾಗೂ ಕಾರ್ಕಳದಲ್ಲಿ 27ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.

ಕಾಪು ತಾಲೂಕು ಶಿರ್ವ ಗ್ರಾಮದ ಬಾಬು ಪೂಜಾರಿ ಎಂಬವರ ಮನೆಯ ಮೇಲೆ ಸಿಡಿಲು ಬಡಿದು ಅಪಾರ ಹಾನಿಯಾಗಿದ್ದು, 50 ಸಾವಿರ ರೂ.ಗಳಿಗೂ ಅಧಿಕ ನಷ್ಟವಾದ ಬಗ್ಗೆ ತಿಳಿದುಬಂದಿದೆ.

ಅಲ್ಲದೇ ನಿನ್ನೆ ಅಪರಾಹ್ನ 2:00 ಗಂಟೆ ಸುಮಾರಿಗೆ ಬ್ರಹ್ಮಾವರ ತಾಲೂಕು ಚೇರ್ಕಾಡಿಯ ಸಾಧು (65) ಎಂಬವರು ಗದ್ದೆ ಕೆಲಸದಲ್ಲಿ ನಿರತರಾಗಿದ್ದಾಗ ವಿದ್ಯುತ್ ಪ್ರಹರಿಸುತಿದ್ದ ತಂತಿಯೊಂದು ತುಂಡಾಗಿ ಮೈಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ವಿಠಲ ಗೊಲ್ಲ ಬಿನ್ ಬಸವ ಗೊಲ್ಲ (42) ಎಂಬವರು ಜು.8ರಂದು ಮನೆಯ ಸಮೀಪದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News