ಮುಂಡಗೋಡ: 13 ಮಂದಿಗೆ ಕೊರೋನ ಪಾಸಿಟಿವ್

Update: 2020-07-10 13:48 GMT

ಮುಂಡಗೋಡ, ಜು. 10 : ಕೊರೋನ ಪಾಸಿಟಿವ್ ತಾಲೂಕಿನಲ್ಲಿ 13 ಪ್ರಕರಣಗಳು ದೃಢಪಟ್ಟಿವೆ. ಪಟ್ಟಣದ 11 ಜನರಿಗೆ, ಟಿಬೇಟಿಯನ್ ಕ್ಯಾಂಪ್ ನ ಒಬ್ಬರಿಗೆ ಹಾಗೂ ಗ್ರಾಮಾಂತರ ಪ್ರದೇಶ ಒಬ್ಬರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ ಎಂದು ತಹಶೀಲ್ದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಟ್ಟಣದ ಬಸವನಬೀದಿಯ ರೋಗಿ ನಂ ಪಿ-23158 ನ ಪ್ರಥಮ ಸಂಪರ್ಕದಿಂದ 11 ಜನರಿಗೆ ಕೊರೊನಾ ಪಾಸೀಟಿವ್ ಬಂದಿದೆ. ಬಸವನ ಬೀದಿಯ 38 ವಯಸ್ಸಿನ ಮಹಿಳೆಗೆ, 17 ವರ್ಷದ ಯುವತಿಗೆ, 36 ವರ್ಷದ ಮಹಿಳೆಗೆ,  7 ವರ್ಷದ ಬಾಲಕಿಗೆ, 14, 12 ವರ್ಷದ ಬಾಲಕರಿಗೆ 43 ವರ್ಷದ ಪುರಷನಿಗೆ, ಹೊಸ ಓಣಿಯ 26 ವರ್ಷದ ಮಹಿಳೆಗೆ ಹಾಗೂ 8 ವರ್ಷದ ಬಾಲಕನಿಗೆ, ಸಿರ್ಸಿ ರಸ್ತೆಯ 36 ವರ್ಷದ ಮಹಿಳೆಗೆ ಹಾಗೂ 15 ವರ್ಷದ ಬಾಲಕನಿಗೆ ಕೊರೋನ ಪಾಸಿಟಿವ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News