ಸಾರ್ವಜನಿಕ ರಸ್ತೆ ಕೆಸರುಮಯ: ಬಿಲ್ಡರ್ಸ್‌ ಕಂಪೆನಿಗೆ 25 ಸಾವಿರ ರೂ. ದಂಡ

Update: 2020-07-10 14:57 GMT

ಉಡುಪಿ, ಜು.10: ಕಟ್ಟಡ ಕಾಮಗಾರಿಯಿಂದಾಗಿ ಕಲ್ಸಂಕ- ಅಂಬಾಗಿಲು ರಸ್ತೆಯನ್ನು ಕೆಸರುಮಯಗೊಳಿಸಿರುವ ಬಿಲ್ಡರ್ಸ್‌ ಕಂಪೆನಿಯೊಂದಕ್ಕೆ ಉಡುಪಿ ನಗರಸಭೆ ನೋಟೀಸ್ ಜಾರಿ ಮಾಡಿ, 25ಸಾವಿರ ರೂ. ದಂಡ ವಸೂಲಿ ಮಾಡಿದೆ.

ರಸ್ತೆಯಲ್ಲಿ ವಾಹನಗಳಲ್ಲಿ ಮಣ್ಣುಗಳನ್ನು ಚೆಲ್ಲಿಕೊಂಡು ಇಡೀ ರಸ್ತೆಯನ್ನು ಕೆಸರುಮಯಗೊಳಿಸಿರುವ ಡಿ ಮಾರ್ಟ್ ಕಂಪೆನಿಗೆ ಮೂರು ದಿನಗಳ ಹಿಂದೆ ನಗರಸಭೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್‌ರಾಜ್, ರಸ್ತೆಯನ್ನು ಸಂಪೂರ್ಣವಾಗಿ ಸರಿ ಮಾಡಿಕೊಡುವಂತೆ ಮೌಖಿಕ ಎಚ್ಚರಿಕೆಯನ್ನು ನೀಡಿದ್ದರು.

ಆದರೂ ಸ್ಪಂದಿಸದ ಕಂಪೆನಿಗೆ ಇಂದು 25ಸಾವಿರ ರೂ. ದಂಡ ವಿಧಿಸಿ ನೋಟೀಸ್ ಜಾರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪೆನಿಯವರು ಇಂದೇ ದಂಡವನ್ನು ಪಾವತಿಸಿದ್ದಾರೆ. ಅಲ್ಲದೆ ಮುಂದೆ ಈ ರೀತಿ ಯಾವುದೇ ಸಮಸ್ಯೆ ಯಾದರೂ ಕಂಪೆನಿಯೇ ಸರಿ ಮಾಡಿಸಿಕೊಡಬೇಕು ಮತ್ತು ಪ್ರತಿದಿನ ರಸ್ತೆಯ ಕೆಸರನ್ನು ಕ್ಲೀನ್ ಮಾಡಬೇಕು. ಇಲ್ಲದಿದ್ದರೆ ಮತ್ತೆ 25ಸಾವಿರ ರೂ. ದಂಡ ವಿಧಿಸ ಲಾಗುವುದು ಎಂದು ಕಂಪೆನಿಯಿಂದ ಮುಚ್ಚಳಿಕೆ ಪತ್ರ ಪಡೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News