ದ.ಕ. ಜಿಲ್ಲೆಯಲ್ಲಿ ಶುಕ್ರವಾರ 139 ಮಂದಿಗೆ ಕೊರೋನ ಪಾಸಿಟಿವ್

Update: 2020-07-10 18:14 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜು.9: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಇತ್ತೀಚೆಗೆ ತೀರಾ ಏರುಗತಿಯಲ್ಲಿ ಕಂಡುಬರುತ್ತಿದೆ. ಮತ್ತೆ ಎಂಟು ಮಂದಿಯನ್ನು ಕೊರೋನ ಬಲಿ ಪಡೆಯುವ ಜೊತೆಗೆ, ಒಂದೇದಿನ ಬರೋಬ್ಬರಿ 139 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಪತ್ತೆಯಾಗದಿರುವುದು ಜಿಲ್ಲೆಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಇನ್ನು ಆಶಾದಾಯಕ ಬೆಳವಣಿಗೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 51 ಮಂದಿ ಸೋಂಕು ಮುಕ್ತರಾಗಿ ಮನೆಗೆ ಮರಳಿದ್ದಾರೆ.

ಸೋಂಕಿತರ ಪೈಕಿ ಬಹುತೇಕರಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. 15 ಪ್ರಕರಣಗಳಲ್ಲಿ ಸೋಂಕು ಮೂಲ ಇನ್ನೂ ಪ್ರಗತಿಯಲ್ಲಿದ್ದರೆ, ಉಳಿದವು ಹೆಚ್ಚಿನರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುವವರಾಗಿದ್ದಾರೆ. 

ಮಂಗಳೂರು ಸುತ್ತಮುತ್ತ ಹೆಚ್ಚಿದ ಸೋಂಕು: ಮಂಗಳೂರು ನಗರದ ಸುತ್ತಮುತ್ತಲಿನಲ್ಲಿ ಪ್ರದೇಶದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕೊರೋನ ಸೋಂಕು ಪ್ರಕರಣಗಳು ಕಂಡುಬಂದಿವೆ. ಇದರಿಂದ ಸಹಜವಾಗಿಯೇ ಸಾರ್ವಜನಿಕರಲ್ಲಿ ಭೀತಿ ಮೂಡಿದೆ.

ನಗರದ ಕಂಕನಾಡಿ, ಕುದ್ರೋಳಿ, ಫಳ್ನೀರ್, ಗೋರಿಗುಡ್ಡ, ಕೋಡಿಕಲ್, ಪೊಲೀಸ್ ಲೈನ್, ಬರ್ಕೆ, ಕದ್ರಿ, ಕೋಡಿಯಾಲ್‌ಬೈಲ್, ಬಿಜೈ, ಕಾವೂರು, ಮಂಗಳೂರು ರೈಲ್ವೆ ಕ್ವಾಟ್ರಸ್, ಲ್ಯಾಂಡ್‌ಲಿಂಕ್ಸ್, ಬಂಟ್ಸ್ ಹಾಸ್ಟೆಲ್, ಪದವಿನಂಗಡಿ, ಬೆಂಗ್ರೆ ಕಸಬ, ಬೋಳೂರು, ಕುಂಟಿಕಾನ, ಮುಲ್ಕಿ ಕಿಲ್ಪಾಡಿ, ಚೊಕ್ಕಬೆಟ್ಟು, ಕಾಟಿಪಳ್ಳ, ಸುರತ್ಕಲ್, ವಾಮಂಜೂರು, ಕೈಕಂಬ, ಪಡುಮಾರ್ನಾಡು, ಬಸ್ತಿಪಡ್ಪು, ತೌಡುಗೋಳಿ, ಹರೇಕಳ, ಅಂಬ್ಲಮೊಗರು, ಸೋಮೇಶ್ವರ, ಕೋಟೆಕಾರ್, ಅಜ್ಜಿನಡ್ಕ, ಬಿಸಿ ರೋಡ್, ಪಾಣೆಮಂಗಳೂರು, ತುಂಬೆ, ಪುದು, ಸಜಿಪಮೂಡ, ಕಕ್ಕೆಪದವು, ಪೆರಂಕಿ, ಕೈಕಂಬ, ಬೆಳ್ತಂಗಡಿ, ಸುಳ್ಯದ ವ್ಯಕ್ತಿಗಳಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಒಟ್ಟು ಸೋಂಕಿತರು- 1848
ಗುಣಮುಖರು- 753
ಮೃತರು- 38
ಚಿಕಿತ್ಸೆ ಪಡೆಯುತ್ತಿರುವವರು- 1057

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News