ಶಿರ್ವ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

Update: 2020-07-10 16:41 GMT

ಶಿರ್ವ, ಜು.10: ಹಾವೇರಿ ಮೂಲದ ಯುವತಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವ ಗ್ರಾಮದ ಕ್ವಾಲಿಟಿ ಕೋಳಿ ಫಾರಂ ಬಳಿ ನಡೆದಿದೆ.

ಮೃತರನ್ನು ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಾಗೂ ಪ್ರಸ್ತುತ ಶಿರ್ವ ಕ್ವಾಲಿಟಿ ಕೋಳಿ ಫಾರಂ ಬಳಿಯ ಬಾಡಿಗೆ ಮನೆ ನಿವಾಸಿ ಯಲ್ಲಪ್ಪ ಎಂಬವರ ಮಗಳು ಸೌಭಾಗ್ಯ(18) ಎಂದು ಗುರುತಿಸಲಾಗಿದೆ. ಜು.8ರಂದು ಬೆಳಗ್ಗೆ ಮನೆಯಿಂದ ಹೊರಗಡೆ ಹೋದವರು ನಾಪತ್ತೆಯಾಗಿದ್ದರು. ಇಂದು ಬೆಳಗ್ಗಿನ ಜಾವ ಮನೆ ಸಮೀಪದ ಬಾವಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.

ಇವರು ವೈಯಕ್ತಿಕ ಕಾರಣದಿಂದ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ದೂರಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News