ಪಿ.ಎ. ಫಾರ್ಮಸಿ ಕಾಲೇಜಿನಲ್ಲಿ ಔಷಧೀಯ ಉದ್ಯಾನವನ ಅಭಿವೃದ್ಧಿ ಕಾರ್ಯಕ್ರಮ

Update: 2020-07-11 04:28 GMT

ಮಂಗಳೂರು, ಜು.11: ನಡುಪದವಿನಲ್ಲಿರುವ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ಆವರಣದಲ್ಲಿ ಹೊಸದಾಗಿ ಗಿಡಮೂಲಿಕೆ ಹಾಗೂ ಔಷಧೀಯ ಉದ್ಯಾನ ನಿರ್ಮಾಣಕ್ಕೆ ಚಾಲನೆ ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.

ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್ ಔಷಧೀಯ ಗಿಡಗಳನ್ನು ನೆಡುವ ಮೂಲಕ ಉದ್ಯಾನವನ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗಿಡ ನೆಟ್ಟರೆ ಸಾಲದು ಅದರ ಸಂರಕ್ಷಣೆ ಮುಖ್ಯ. ನಮ್ಮ ದೇಶದ ಅದೆಷ್ಟೋ ಔಷಧೀಯ ಸಸ್ಯಗಳು ಇಂದು ಕಣ್ಮರೆಯಾಗಿವೆ. ಪರಿಸರ ಅಸಮತೋಲನ ಹಲವಾರು ನೈಸರ್ಗಿಕ ವಿಪತ್ತಿಗೆ ಕಾರಣವಾಗಿವೆ. ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ಹೊಂದಬೇಕು ಎಂದರು.

ಈ ಸಂದರ್ಭ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ.ರಮೀಝ್, ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಸಲೀಮುಲ್ಲಾ ಖಾನ್, ಡಾ.ಮುಹಮ್ಮದ್ ಮುಬೀನ್ ಮತ್ತು ಹಾರಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News