ಸಂಪರ್ಕದಿಂದ ಹರಡುತ್ತಿರುವ ಕೋವಿಡ್: ಕಾಸರಗೋಡು ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳು ಒಂದು ವಾರ ಬಂದ್

Update: 2020-07-11 04:56 GMT

ಕಾಸರಗೋಡು, ಜು.11: ಜಿಲ್ಲೆಯಲ್ಲಿ ಸಂಪರ್ಕದಿಂದ ಕೊರೋನ ಸೋಂಕು ಹರಡುತ್ತಿರುವ ಹಿನ್ನ್ನೆಲೆಯಲ್ಲಿ ಪ್ರಮುಖ ಮಾರುಕಟ್ಟೆಗಳನ್ನು ಒಂದು ವಾರಗಳ ಕಾಲ ಸಂಪೂರ್ಣ ಮುಚ್ಚಲಾಗಿದೆ.

ಕಾಲಿಕಡವು ಮೀನು -ತರಕಾರಿ ಮಾರುಕಟ್ಟೆ, ಚೆರ್ಕಳ ಪೇಟೆ, ಕಾಞಂಗಾಡ್ ಮೀನು ಮತ್ತು ತರಕಾರಿ ಮಾರುಕಟ್ಟೆ, ತ್ರಿಕ್ಕರಿಪುರ ನೀಲೇಶ್ವರ, ಕುಂಬಳೆ ಕಾಸರಗೋಡು ತರಕಾರಿ ಮತ್ತು ಮೀನು ಮಾರುಕಟ್ಟೆ, ಕುಂಜತ್ತೂರು ಮಾಡದಲ್ಲಿರುವ ಮೀನು ಮಾರುಕಟ್ಟೆ, ಉಪ್ಪಳ ಮೀನು ಮಾರುಕಟ್ಟೆ, ಉಪ್ಪಳ ಹನಫಿ ಬಝಾರ್ ತರಕಾರಿ ಅಂಗಡಿ, ಮಜೀರ್‌ಪಳ್ಳ ತರಕಾರಿ ಅಂಗಡಿಗಳನ್ನು ಜುಲೈ 17ರ ತನಕ ಮುಚ್ಚಲಾಗಿದೆ. ಅದೇರೀತಿ ಕಾಸರಗೋಡು ನಗರದಲ್ಲಿ ಮಾರುಕಟ್ಟೆ ಪ್ರವೇಶದ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ.

ಶುಕ್ರವಾರ ನಗರದ ಐವರು ವ್ಯಾಪಾರಿಗಳು ಸೇರಿದಂತೆ 11 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಸಂಪರ್ಕದಿಂದ ತೀವ್ರವಾಗಿ ಸೋಂಕು ಹರಡುತ್ತಿರುವುದರಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದು, ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮ್ ದಾಸ್ ನೇತೃತ್ವದಲ್ಲಿ ತುರ್ತು ಸಭೆ ಸೇರಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿತು.

ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಶುಕ್ರವಾರ ಸಂಪರ್ಕದಿಂದ 11 ಮಂದಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News