ಸಾಲಿಗ್ರಾಮ ಪಪಂ: ಕೋವಿಡ್-19 ನಿಯಮ ಪಾಲನೆಗೆ ಕರೆ

Update: 2020-07-11 11:30 GMT

ಉಡುಪಿ, ಜು.11: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಹಾಗೂ ಅಂಗಡಿ ಮುಂಗಟ್ಟುಗಳ ಮಾಲಕರು ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸುರಕ್ಷಿತಾ ಅಂತರ ಪಾಲಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ. ತಪ್ಪಿದ್ದಲ್ಲಿ ದಂಡ ವಿಧಿಸಾಗುವುದು ಎಂದು ಅದು ಎಚ್ಚರಿಸಿದೆ.

ಪಟ್ಟಣ ಪಂಚಾತ್ ವ್ಯಾಪ್ತಿಯಲ್ಲಿ ಮದುವೆ ಮುಂತಾದ ಕಾರ್ಯಕ್ರಮ ಗಳನ್ನು ಪೂರ್ವಾನುಮತಿ ಪಡೆದು ಮುಂಜಾಗೃತ ಕ್ರಮಗಳೊಂದಿಗೆ ನಿರ್ವಹಿಸ ಬೇಕು ಹಾಗೂ ಇವುಗಳಲ್ಲಿ 50ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನ ಸೇರದಂತೆ ಕಡ್ಡಾಯವಾಗಿ ನೋಡಿಕೊಳ್ಳಬೇಕು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಕೆಲಸವಿದ್ದಲ್ಲಿ ಮಾತ್ರ ಒಬ್ಬೊಬ್ಬರೇ ಬರಬೇಕು.
ಪಟ್ಟಣ ಪಂಚಾತ್ ವ್ಯಾಪ್ತಿಯಲ್ಲಿ ಮದುವೆ ಮುಂತಾದ ಕಾರ್ಯಕ್ರಮಗಳನ್ನು ಪೂರ್ವಾನುಮತಿ ಪಡೆದು ಮುಂಜಾಗೃತ ಕ್ರಮಗಳೊಂದಿಗೆ ನಿರ್ವಹಿಸ ಬೇಕು ಹಾಗೂ ಇವುಗಳಲ್ಲಿ 50ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನ ಸೇರದಂತೆ ಕಡ್ಡಾಯವಾಗಿ ನೋಡಿಕೊಳ್ಳಬೇಕು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಕೆಲಸವಿದ್ದಲ್ಲಿ ಮಾತ್ರ ಒಬ್ಬೊಬ್ಬರೇ ಬರಬೇಕು. ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸಾಮಗ್ರಿಗಳ ಖರೀದಿ ಹೊರತುಪಡಿಸಿ ಅನಗತ್ಯ ಸಂಚಾರಮಾಡು ವಂತಿಲ್ಲ. ಸಾರ್ವಜನಿಕರು ಕೋವಿಡ್-19 ವಿರುದ್ದದ ಹೋರಾಡಲು ಪಟ್ಟಣ ಪಂಚಾಯತ್‌ನೊಂದಿಗೆ ಕೈಜೋಡಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪ್ರಕಟಣೆಯಲ್ಲಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News