ಐಸಿಎಸ್‍ಇ ಫಲಿತಾಂಶ: ನ್ಯೂ ಶಮ್ಸ್ ಸ್ಕೂಲ್‍ಗೆ ಸತತ ನಾಲ್ಕನೇ ವರ್ಷ ಶೇ.100 ಫಲಿತಾಂಶ

Update: 2020-07-11 12:09 GMT

ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯಿಂದ ನಡೆಸಲ್ಪಸಡುವ ನ್ಯೂ ಶಮ್ಸ್ ಸ್ಕೂಲ್ (ಐಸಿಎಸ್‍ಇ ಪಠ್ಯಕ್ರಮ)ದ ಹತ್ತನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು 7ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವುದರ ಮೂಲಕ ಅಗ್ರಶ್ರೇಯಾಂಕದಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಅನಂ ಆಲಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿದ್ಯಾರ್ಥಿಗಳಾದ ಮುಸ್ಕಾನ್ ನವಾಬ್ ಖಾನ್, ಶಝಫಾ ಇಬ್ರಾಹೀಮ್ ಶೇಕುಜಿ, ಹಾಜಿರಾ ಹುನೈನ್ ಅಬ್ದುಲ್ ಹಮೀದ್ ಕೋಲಾ, ರಹಾಫ್ ಅಬ್ದುಲ ರವೂಫ್ ದಾಮ್ದಾಬು, ಆಯಿದಾ ಮುಹಮ್ಮದ್ ಜಾಫರ್, ಫಾತಿಮಾ ಅಸ್ರಾ ಝಾಹಿದ್ ಹುಸೇನ್ ಶೇಖ್, ಅರ್ಷಿ ಮುಹಮ್ಮದ್ ಯಾಖೂಬ್ ಶೇಖ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ನ್ಯೂ ಶಮ್ಸ್ ಸ್ಕೂಲ್ ಚೇರ್ಮನ್ ಕಾದಿರ್ ಮೀರಾ ಪಟೇಲ್, ಪ್ರಾಂಶುಪಾಲೆ ಫಹಮಿದಾ ಖಿಝರ್, ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ. 

ದಾಖಲಾತಿ ಆರಂಭ: ನೂತನ ಶೈಕ್ಷಣಿಕ ವರ್ಷದ ಶಾಲಾ ದಾಖಲಾತಿಗಳು ಆರಂಭಗೊಂಡಿದ್ದು ಕೊರೋನಾ ಮಹಾಮಾರಿ ಸಂಕಷ್ಟವನ್ನು ದೃಷ್ಟಿಯಲ್ಲಿಟ್ಟುಕೊಂಡು ದಾಖಲಾತಿ ಶುಲ್ಕಗಳನ್ನು ಕಡಿತಗೊಳಿಸಿದ್ದು ಪಾಲಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಚೇರಿ ಸಮಯದಲ್ಲಿ ಶಾಲೆಗೆ ಬಂದು  ತಮ್ಮ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News