ದ.ಕ. ಜಿಲ್ಲೆಯಲ್ಲಿ ಶನಿವಾರ 186 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 2,034ಕ್ಕೆ ಏರಿಕೆ

Update: 2020-07-11 17:15 GMT

ಮಂಗಳೂರು, ಜು.11: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಮತ್ತೆ ಮೂವರು ಕೊರೋನ ಸೋಕಿಗೆ ಬಲಿಯಾಗಿದ್ದು, ಒಂದೇ ದಿನ ಬರೋಬ್ಬರಿ 186 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಅತಿಹೆಚ್ಚಿನ ಸಂಖ್ಯೆಯ ಕೊರೋನ ಪಾಸಿಟಿವ್ ಪ್ರಕರಣಗಳು ಬಂದಿದೆ. ಈ ಮೊದಲು 183 ಪ್ರಕರಣ ದಾಖಲಾಗಿದ್ದವು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕೀತರ ಸಂಖ್ಯೆ 2034ಕ್ಕೆ ಏರಿಕೆಯಾಗಿದೆ. ಇದರಲ್ಲಿ 10 ಪ್ರಕರಣಗಳು ಹೊರ ಜಿಲ್ಲೆಯವು.

ಸೋಂಕಿತರ ಸಂಪರ್ಕದಲ್ಲಿದ್ದ 37, ಐಎಲ್‌ಐ 64, ಎಸ್‌ಎಆರ್‌ಐ 17, ಕತರ್ ಮತ್ತು ದುಬೈನಿಂದ ಬಂದಿದ್ದ 10 ಮಂದಿ, 56 ಮಂದಿಗೆ ಸೋಂಕು ಯಾರಿಂದ ತಗುಲಿದೆ ಎನ್ನುವುದೇ ತಿಳಿದಿಲ್ಲ. ಇಬ್ಬರು ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದರು. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧೀಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಮೂಲ ನಿಗೂಢ ಪ್ರಕರಣ ಹೆಚ್ಚಳ: ಯಾವುದೇ ಸೋಂಕಿತರ ಸಂಪರ್ಕ ಇರದ 56 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನಲ್ಲಿ 32, ರ್ಯಾಂಡಮ್ ಸ್ಯಾಂಪಲ್‌ನಲ್ಲಿ 13, ಪ್ರೀ-ಸರ್ಜರಿ ಸ್ಯಾಂಪಲ್‌ನಲ್ಲಿ ಏಳು, ಪ್ರೀ-ಡೆಲಿವರಿ ಸ್ಯಾಂಪಲ್‌ನಲ್ಲಿ ನಾಲ್ಕು ಪ್ರಕರಣಗಳು ಕಂಡುಬಂದಿವೆ. 

ಕೋವಿಡ್‌ಗೆ ಮತ್ತೆ ಮೂವರು ಬಲಿ
ದ.ಕ. ಜಿಲ್ಲೆಯಲ್ಲಿ ಕೊರೋನದಿಂದಾಗಿ ಮತ್ತೆ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಕೊರೋನ ಸೋಂಕಿಗೆ ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ಸಾವಿಗೀಡಾದವರಲ್ಲಿ 33 ವರ್ಷ ವಯಸ್ಸಿನ ಯುವಕರೊಬ್ಬರೂ ಸೇರಿದ್ದಾರೆ. ಇವರು ಕೊರೋನ ಮಾತ್ರವಲ್ಲದೆ, ಇತರ ಕಾಯಿಲೆಯಿಂದಲೂ ಬಳಲುತ್ತಿದ್ದರು. ಅದೇ ರೀತಿ ವಿವಿಧ ರೋಗಗಳಿಂದ ಬಳಲುತ್ತಿದ್ದ 67 ವರ್ಷದ ಮಹಿಳೆ ಹಾಗೂ 78 ವರ್ಷದ ವ್ಯಕ್ತಿ ಕೂಡ ಮಹಾಮಾರಿಗೆ ಬಲಿಯಾಗಿದ್ದಾರೆ.

ಒಟ್ಟು ಸೋಂಕಿತರು- 2034
ಗುಣಮುಖರು- 782
ಮೃತರು- 41
ಚಿಕಿತ್ಸೆ ಪಡೆಯುತ್ತಿರುವವರು- 1211

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News