ಎರಡನೇ ರವಿವಾರವೂ ಸ್ತಬ್ಧವಾಗಿರುವ ದ.ಕ. ಜಿಲ್ಲೆ

Update: 2020-07-12 04:27 GMT

ಮಂಗಳೂರು, ಜು.12: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರವಿವಾರದ ಲಾಕ್‌ಡೌನ್ ಈ ವಾರವೂ ಮುಂದುವರಿದಿದ್ದು, ಶನಿವಾರ ರಾತ್ರಿಯಿಂದಲೇ ದ.ಕ. ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ಆಳವಡಿಸಿ ಪಹರೆ ನಡೆಸುತ್ತಿದ್ದಾರೆ.

ಹೆದ್ದಾರಿ, ರಸ್ತೆಗಳಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚರಿಸುತ್ತಿವೆ. ನಗರದ ಪ್ರಮುಖ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ನಗರದ ಒಳಭಾಗದಲ್ಲಿ ಮಾಂಸ, ತರಕಾರಿ, ಕೆಲ ದಿನಸಿ ಅಂಗಡಿಗಳು ಮಾತ್ರ ತೆರೆದಿವೆ. ಬೆರಳೆಣಿಕೆಯ ಮಂದಿ ರಸ್ತೆ ಗಳಲ್ಲಿ ಓಡಾಟ ಹಾಗೂ ಖರೀದಿ ನಡೆಸುತ್ತಿದ್ದಾರೆ. ಹಂಪನಕಟ್ಟೆಯ ಮೀನು ಮಾರುಕಟ್ಟೆ ಸೇರಿದಂತೆ ಎಲ್ಲಾ ಮಾರುಕಟ್ಟೆಗಳೂ ಸಂಪೂರ್ಣ ಬಂದ್ ಆಗಿವೆ.

ಮಂಗಳೂರಿನ ಆಯಕಟ್ಟಿನ ಪ್ರದೇಶ ಹಾಗೂ ಪ್ರವೇಶ ದ್ವಾರಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಖಾಸಗಿ ವಾಹನಗಳಲ್ಲಿ ಸಂಚರಿಸುವವರನ್ನು ತಡೆದು ವಿಚಾರಣೆ ನಡೆಸಿ ಅನಗತ್ಯವಾಗಿ ಸಂಚರಿಸುತ್ತಿದ್ದರೆ ವಾಪಸ್ ಕಳುಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News