ಉತ್ತರ ಕನ್ನಡ ಜಿಲ್ಲೆಯಲ್ಲಿ ರವಿವಾರ 11 ಮಂದಿಗೆ ಕೊರೋನ ಪಾಸಿಟಿವ್

Update: 2020-07-12 13:19 GMT

ಕಾರವಾರ,ಜು.12: ಉತ್ತರ  ಕನ್ನಡ ಜಿಲ್ಲೆಯಲ್ಲಿ ಇಂದು 11 ಕೊರೋನ ಪ್ರಕರಣಗಳು ಪತ್ತೆಯಾಗಿದೆ. ಇವರಲ್ಲಿ ಎಂಟು ಪುರುಷ ಹಾಗೂ ಮೂರು ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಬೇರೆ ಜಿಲ್ಲೆಯಲ್ಲಿ ಚಿಕಿತ್ಸೆಗೆ ದಾಖಲಾದ ಮೂವರ ಮಾಹಿತಿ ಸಹ ಇಂದಿನ ಜಿಲ್ಲೆಯ ಬಲೆಟಿನ್ ನಲ್ಲಿ ಸೇರ್ಪಡೆಯಾಗಿದ್ದರಿಂದ ಜನರು ಗೊಂದಲಕ್ಕಿಡಾದರು.

ಪತ್ತೆಯಾದ ಪ್ರಕರಣಗಳ ಪೈಕಿ ಕಾರವಾರ 5, ಹಳಿಯಾಳ 1, ಭಟ್ಕಳ 2, ಸಿದ್ದಾಪುರ 2, ದಾಂಡೇಲಿ 1 ಪ್ರಕರಣ ದೃಢಪಟ್ಟಿದೆ. ಕಾರವಾರದ ಐದು ಪ್ರಕರಣಗಳ ಪೈಕಿ 22 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದ್ದು ಈತ ತಾಲೂಕಿನ ಬೈತಖೋಲದವನಾಗಿದ್ದು ಪ್ರಾಥಮಿಕ ಸಂಪರ್ಕದಿಂದ ಸೋಂಕಿತರನಾಗಿದ್ದಾನೆ. ಅದರಂತೆ ಅಮದಳ್ಳಿಯ ಕಂತ್ರಿವಾಡಾದ 16 ಬಾಲಕ ಬೆಂಗಳೂರಿನಿಂದ ವಾಪಸ್ಸಾಗಿದ್ದು, 25ರ ಕಿಮ್ಸ್ ಆರೋಗ್ಯ ಸಿಬ್ಬಂದಿ, 27ರ ಯುವಕ ಹಬ್ಬುವಾಡಾ ಹಾಗೂ 35ರ ಮಹಿಳೆ ಕಾರವಾರ ನಗರದ ಪ್ರಯಾಣ ಇತಿಹಾಸ ಪತ್ತೆ ಮಾಡಲಾಗುತ್ತಿದೆ.

ಭಟ್ಕಳದ 17ರ ಬಾಲಕ ಬೆಳಕೆ ಭಟ್ಕಳ ಪ್ರಯಾಣದ ಇತಿಹಾಸ ಪತ್ತೆಯಾಗಿಲ್ಲ.  25ರ ಯುವಕ ಹೆಬಳೆ ಬೆಂಗಳೂರಿನಿಂದ ವಾಪಸ್ಸಾಗಿದ್ದಾರೆ. ಸಿದ್ದಾಪುರ ತಾಲೂಕಿನ 44 ರ ವ್ಯಕ್ತಿ ತಾಲೂಕು ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ, 73ರ ವೃದ್ಧೆ ಪ್ರಾಥಮಿಕ ಸಂಪರ್ಕ, ದಾಂಡೇಲಿಯ 80 ರ ವೃದ್ಧ ಟೌನ್ಶಿಪ್ ದಾಂಡೇಲಿ ಪ್ರಾಥಮಿಕ ಸಂಪರ್ಕ ಸೋಂಕಿತರಾಗಿದ್ದಾರೆ.

ಉಳಿದಂತೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ 23ರ ಯುವಕ ಭಟ್ಕಳ, 63 ವರ್ಷದ ವ್ಯಕ್ತಿ ಮಂಗಳೂರಿನಲ್ಲಿ ದಾಖಲಾಗಿದ್ದು ಈತ ಕುಮಟಾದವ ಎಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ 43 ವರ್ಷದ ಪುರುಷ ಬೆಂಗಳೂರಿನಲ್ಲಿ ದಾಖಲಾಗಿದ್ದು ಈ ಮೂವರ ಸಂಖ್ಯೆಯ ಇಂದಿನ ಬುಲೆಟಿನಲ್  ನಲ್ಲಿ ದಾಖಲಾಗಿದೆ. ಇದು ಜಿಲ್ಲೆಯ ಸಂಖ್ಯೆಗೆ  ಸೇರ್ಪಡೆಯಾಗಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಗೊಂದಲ ಸೃಷ್ಠಿಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News