ನದಿಗೆ ಕೋಳಿ ತ್ಯಾಜ್ಯ ಸುರಿಯುತ್ತಿದ್ದ ಫಾರ್ಮ್ ವಿರುದ್ಧ ಕ್ರಮ

Update: 2020-07-12 13:36 GMT

ಸಾಲಿಗ್ರಾಮ, ಜು.12: ಮಾಬುಕಳ ಸೇತುವೆಯ ಬಳಿ ಜು.12ರಂದು ಬೆಳಗ್ಗೆ ನದಿಗೆ ಕೋಳಿ ತ್ಯಾಜ್ಯವನ್ನು ಸುರಿಯುತ್ತಿದ್ದ ಫಾರ್ಮ್ ವಿರುದ್ಧ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪ್ರಕರಣ ದಾಖಲಿಸುವ ಮೂಲಕ ಕ್ರಮಕ್ಕೆ ಮುಂದಾಗಿದೆ.

ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಮ್ಮ ಇಲಾಖಾ ವಾಹನ ದಲ್ಲಿ ಕುಂದಾಪುರಕ್ಕೆ ತೆರಳುತ್ತಿದ್ದ ಸಂದರ್ಭ ಮಾಬುಕಳ ಸೇತುವೆಯಲ್ಲಿ ಲಕ್ಷ್ಮೀ ಫಾಲ್ಟ್ರಿ ಫಾರ್ಮ್‌ಗೆ ಸಂಬಂಧಿಸಿದ ವಾಹನದಲ್ಲಿ ಇಬ್ಬರು ಕೋಳಿ ತ್ಯಾಜ್ಯವನ್ನು ನದಿಗೆ ಸುರಿಯುತ್ತಿರುವುದನ್ನು ಗಮನಿಸಿದರು.

ಕೂಡಲೇ ತಮ್ಮ ವಾಹನ ನಿಲ್ಲಿಸಿದ ಅಪರ ಜಿಲ್ಲಾಧಿಕಾರಿ, ಲಕ್ಷ್ಮೀ ಪಾಲ್ಟ್ರಿ ಫಾರ್ಮ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚಿಸದರೆನ್ನಲಾಗಿದೆ. ಅದರಂತೆ ಫಾರ್ಮ ವಿರುದ್ಧ ಪ್ರಕರಣ ದಾಖಲು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಾಲಿಗ್ರಾಮ ಪಪಂ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News