ಗುರುಪುರ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಬೊಂಡಂತಿಲದಲ್ಲಿ ಮನೆ: ಜಿಲ್ಲಾಡಳಿತ ಕ್ರಮಕ್ಕೆ ಗ್ರಾಮಸ್ಥರ ವಿರೋಧ

Update: 2020-07-12 14:12 GMT

ಮಂಗಳೂರು, ಜು.12: ಗುರುಪುರ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಬೊಂಡಂತಿಲ ಗ್ರಾಮದ ಗೋಮಾಳದಲ್ಲಿ ಹಾಗೂ ಕುಮ್ಕಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಲು ಹೊರಟಿರುವ ಜಿಲ್ಲಾಡಳಿತ ಕ್ರಮಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ವಿರೋಧದ ಮನವಿಯನ್ನು ಉಪತಹಶೀಲ್ದಾರ್‌ಗೆ ಇತ್ತೀಚೆಗೆ ನೀಡಲಾಯಿತು. ನಮ್ಮ ಗ್ರಾಮ ಪಂಚಾಯತ್‌ನಲ್ಲಿ ಸುಮಾರು 1,000ಕ್ಕಿಂತ ಹೆಚ್ಚು ನಿರಾಶ್ರಿತರು ಇದ್ದು, ಸುಮಾರು 20 ವರ್ಷದಿಂದ ಯಾವುದೇ ಮನೆ ನಿವೇಶನ ನೀಡದೆ ತೊಂದರೆಗೆ ಸಿಲುಕಿದ್ದಾರೆ. ನಿವೇಶನ ನೀಡುವುದಾದರೆ ಗ್ರಾಮದವರಿಗೆ ಮೊದಲ ಆದ್ಯತೆ ನೀಡಬೇಕು. ಗ್ರಾಮದಲ್ಲಿ ಯಾವುದೇ ಸ್ಮಶಾನವಿಲ್ಲ, ಇದಕ್ಕೆ ಬೇಕಾದ ಜಾಗವನ್ನು ಕಾಯ್ದಿರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮನವಿ ಸಲ್ಲಿಕೆ ವೇಳೆ ನೀರುಮಾರ್ಗ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಿಶೋರ್‌ಕುಮಾರ್ ಉಗ್ಗಕೋಡಿ, ತಾಪಂ ಮಾಜಿ ಅಧ್ಯಕ್ಷ ಗೋಕಲ್ ದಾಸ್ ಶೆಟ್ಟಿ, ನಿಕಟ ಪೂರ್ವ ಗ್ರಾಪಂ ಸದಸ್ಯ ಸಚಿನ್ ಹೆಗ್ಡೆ, ಸ್ಥಳೀಯರಾದ ಯಶ್ವಿನ್ ಎನ್. ಕುಂದರ್, ಗೋಪಾಲ್ ಕೊನಿಮಾರ್, ಸತೀಶ್ ಉಗ್ಗಕೊಡಿ, ಸಂಜೀವ ಮಜಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News