ಕಾಸರಗೋಡು: ರವಿವಾರ 56 ಮಂದಿಗೆ ಕೊರೋನ ಸೋಂಕು ದೃಢ

Update: 2020-07-12 14:31 GMT
ಸಾಂದರ್ಭಿಕ ಚಿತ್ರ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ರವಿವಾರ 56 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ  41 ಮಂದಿಗೆ  ಸಂಪರ್ಕದಿಂದ  ಸೋಂಕು ತಗಲಿದೆ.

ಮಧೂರು ಮತ್ತು ಮುಳಿಯಾರು ತಲಾ 10, ಚೆಂಗಳ 11,  ಕುಂಬಳೆ ಮತ್ತು ಪುಲ್ಲೂರು ಪೆರಿಯ ತಲಾ  5, ಮೊಗ್ರಾಲ್ ಪುತ್ತೂರು, ಕಾಸರಗೋಡು, ಚೆಮ್ನಾಡ್ ತಲಾ  2,  ಮಂಗಲ್ಪಾಡಿ, ಪನತ್ತಡಿ, ಮೀಂಜ, ಪಳ್ಳಿಕೆರೆಯಲ್ಲಿ ತಲಾ ಒಬ್ಬರಿಗೆ ಸೋಂಕು  ದೃಢಪಟ್ಟಿದೆ. ಪಳ್ಳಿಕೆರೆಯಲ್ಲಿ  ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ  ಸೋಂಕು ತಗಲಿದೆ.

ನಗರದ  ಚಪ್ಪಲಿ  ಅಂಗಡಿ ಹಾಗೂ ಬುಕ್ ಸ್ಟಾಲ್ ನ ಸಿಬಂದಿಗೆ  ಸೋಂಕು ದ್ರಢಪಟ್ಟಿದೆ. ಕಳೆದ ಒಂದು ವಾರದಿಂದ ಸಂಪರ್ಕದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದು ಆತಂಕಕ್ಕೆ ಕಾರಣವಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 600 ದಾಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 641ಕ್ಕೆ ಏರಿದ್ದು, 434 ಮಂದಿ ಗುಣಮುಖರಾಗಿದ್ದಾರೆ. 207 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News