ದ.ಕ. ಜಿಲ್ಲೆಯಲ್ಲಿ ಒಂದೇ ದಿನ 196 ಮಂದಿಗೆ ಕೊರೋನ ಪಾಸಿಟಿವ್

Update: 2020-07-12 15:00 GMT

ಮಂಗಳೂರು, ಜು.12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಮತ್ತೆ ಬರೋಬ್ಬರಿ 196 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 2230ಕ್ಕೆ ಏರಿಕೆಯಾಗಿದೆ. 94 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.

ಸೋಂಕಿತರ ಪೈಕಿ 20 ಪ್ರಾಥಮಿಕ ಸಂಪರ್ಕಿತರು, ಐಎಲ್‌ಐ 91, ಎಸ್‌ಎಆರ್‌ಐ 16, ವಿದೇಶದಿಂದ ಆಗಮಿಸಿದ್ದ 10, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್ 57, ಪ್ರೀ-ಡೆಲಿವರಿ ಸ್ಯಾಂಪಲ್‌ನಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಎಲ್ಲ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಮೂಲ ಗೊತ್ತಿಲ್ಲದ ಸೋಂಕು ಪ್ರಕರಣ ಏರಿಕೆ: ಒಂದೇ ದಿನದಲ್ಲಿ 196 ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದು ಜಿಲ್ಲೆಯಲ್ಲಿ ಇದೇ ಮೊದಲು. ಇದಕ್ಕಿಂತಲೂ ಆತಂಕದ ಸಂಗತಿಯೆಂದರೆ, ಇವರಲ್ಲಿ ಸೋಂಕು ಮೂಲವೇ ಪತ್ತೆಯಾಗದ ಬರೋಬ್ಬರಿ 57 ಪ್ರಕರಣಗಳಿವೆ. 

ಹಿಂದೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, ಹೊರ ಪ್ರದೇಶಗಳಿಂದ ಬಂದವರಿಗೇ ಹೆಚ್ಚು ಪಾಸಿಟಿವ್ ಬರುತ್ತಿದ್ದರೆ, ಕೆಲ ದಿನಗಳಿಂದ ಏಕಾಏಕಿ ಸೋಂಕು ಹರಡುವ ಸ್ವರೂಪವೇ ಬದಲಾಗಿಬಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News