ಉಡುಪಿಯಲ್ಲಿ 41ಮಿ.ಮೀ. ಮಳೆ: ಮನೆಗೆ ಹಾನಿ

Update: 2020-07-12 15:06 GMT

ಉಡುಪಿ, ಜು.12: ಉಡುಪಿ ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳ ಅವಧಿ ಯಲ್ಲಿ 41.0ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಉಡುಪಿ- 48.00ಮಿ.ಮೀ., ಕುಂದಾಪುರ-46.0ಮಿ.ಮೀ., ಕಾರ್ಕಳ- 29.0ಮಿ.ಮೀ. ಮಳೆಯಾಗಿದೆ. ಜು.10ರಂದು ಬ್ರಹ್ಮಾವರ ತಾಲೂಕಿನ ಹಲು ವಳ್ಳಿ ಗ್ರಾಮದ ಅನಂತ ಮರಕಾಲ ಎಂಬವರ ವಾಸ್ತವ್ಯದ ಮನೆಯು ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿ ಸುಮಾರು 50ಸಾವಿರ ರೂ. ನಷ್ಟ ಉಂಟಾ ಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News