ಕಾಪು ಎಸ್ಸೈ ಸಹಿತ 45 ಸಿಬ್ಬಂದಿಗೆ ಹೋಮ್ ಕ್ವಾರಂಟೇನ್

Update: 2020-07-12 15:23 GMT

ಕಾಪು, ಜು.12: ಕಾಪು ಎಎಸ್ಸೈಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಠಾಣೆಯ ಎಸ್‌ಐ ಸಹಿತ 36 ಪೊಲೀಸರು ಮತ್ತು 9 ಹೋಮ್ ಗಾರ್ಡ್ ಸಿಬ್ಬಂದಿಗಳನ್ನು ಒಂದು ವಾರಗಳ ಕಾಲ ಹೋಮ್ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.

ಸದ್ಯ ಕಾಪು ಠಾಣೆಗೆ ಪಡುಬಿದ್ರಿ, ಶಿರ್ವ ಹಾಗೂ ಕಟಪಾಡಿ ಹೊರ ಠಾಣೆಯ ಪೊಲೀಸರನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ. ಕಟಪಾಡಿ ಹೊರಠಾಣೆಯ ಎಎಸ್‌ಐ ದಯಾನಂದ್‌ರವರಿಗೆ ಠಾಣೆಯ ಜವಾಬ್ದಾರಿ ನೀಡಲಾಗಿದೆ. 48 ಗಂಟೆಗಳ ಅವಧಿಯಲ್ಲಿ ಠಾಣೆಯನ್ನು ಸ್ಯಾನಿಟೈಸ್ ಮಾಡಿ, ಮೂರನೆ ದಿನಕ್ಕೆ ಠಾಣೆಯನು್ನ ಮತ್ತೆ ಪುನಾರಂಭಿಸಲಾಗುತ್ತದೆ.

ಕೊರೋನ ಸೋಂಕಿತ ಎಎಸ್ಸೈ ಅವರನ್ನು ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಸಂಪೂರ್ಣವಾಗಿ ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ಕಾಪು ವೃತ್ತನಿರೀಕ್ಷಕ ಮಹೇಶ್‌ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News