ರಾಜಸ್ಥಾನ ಸರಕಾರ ಉರುಳಿಸಲು ಪೈಲಟ್‌ರಿಂದ ಮೂರನೇ ಪ್ರಯತ್ನ

Update: 2020-07-13 06:11 GMT

ಜೈಪುರ, ಜು.13: ಸಚಿನ್ ಪೈಲಟ್ ರಾಜಸ್ಥಾನದಲ್ಲಿ ಮಾರ್ಚ್ ಬಳಿಕ ಮೂರನೇ ಬಾರಿ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಹೇಳಿವೆ. ಬಂಡಾಯಗಾರರು ಬಿಜೆಪಿಯೊಂದಿಗೆ ಮುಖ್ಯಮಂತ್ರಿ ಹುದ್ದೆಗಾಗಿ ಮಾತುಕತೆಯನ್ನು ನಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

42ರ ಹರೆಯದ ಸಚಿನ್ ಪೈಲಟ್ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ. ಆದರೆ, ಪಕ್ಷದ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಉತ್ತಮ ಸಚಿವ ಸ್ಥಾನದ ಬೇಡಿಕೆಯನ್ನು ಪೈಲಟ್ ಇಟ್ಟಿದ್ದಾರೆ.

 ರಾಜಸ್ಥಾನದ ಉಪ ಮುಖ್ಯಮಂತ್ರಿಯ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಪೈಲಟ್ ಬಳಿ ಸುಮಾರು 12 ಶಾಸಕರ ಬೆಂಬಲವಿದೆ. ಅವರಲ್ಲಿ 30 ಶಾಸಕರು ಬೆಂಬಲ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

 ಕಾಂಗ್ರೆಸ್‌ನ ಉನ್ನತ ಮುಖಂಡರು ಪೈಲಟ್‌ರನ್ನು ಭೇಟಿಯಾಗಿ ಬಂಡಾಯವನ್ನು ಕೈಬಿಡುವಂತೆಯೂ ಮನವೊಲಿಸಿದ್ದಾರೆ. ಪಕ್ಷದ ಬಾಗಿಲು ನಿಮಗೆ ಯಾವಾಗಲೂ ತೆರೆದಿರುತ್ತದೆ ಎಂದು ಅವರಿಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News