ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ಪ್ರಕಟ, ಶೇ.88.78 ಉತ್ತೀರ್ಣ

Update: 2020-07-13 08:45 GMT

ಹೊಸದಿಲ್ಲಿ, ಜು.13: ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು ಪ್ರಕಟಿಸಿದೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ಫಲಿತಾಂಶ ಪೋರ್ಟಲ್ ಸಿಬಿಎಸ್‌ಇರಿಸಲ್ಟ್.ಎನ್‌ಐಸಿ.ಇನ್‌ನಲ್ಲಿ ಪರೀಕ್ಷಿಸಬಹುದು.

ಈ ವರ್ಷದ ಪರೀಕ್ಷೆಯಲ್ಲಿ ಒಟ್ಟು 88.78 ಶೇ. ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷಕ್ಕಿಂತ 5.38 ಶೇ. ಉತ್ತಮ ಫಲಿತಾಂಶ ಬಂದಿದೆ. ಕಳೆದ ವರ್ಷ 83.40 ಶೇ. ಫಲಿತಾಂಶ ಬಂದಿತ್ತು.ಈ ವರ್ಷ ಹುಡುಗಿಯರೇ ಮೇಲುಗೈ ಸಾಧಿಸಿದ್ದು, ಶೇ91.15ರಷ್ಟು ಫಲಿತಾಂಶ ಪಡೆದಿದ್ದಾರೆ

ಈ ವರ್ಷದ ಸಿಬಿಎಸ್‌ಇ ಫಲಿತಾಂಶ ತಯಾರಿಸಲು ಮಂಡಳಿಯು ತನ್ನ ಪರಿಷ್ಕತ ವೌಲ್ಯ ಮಾಪನ ಯೋಜನೆಯನ್ನು ಅನುಸರಿಸಿತ್ತು. ಕೆಲವು ಪತ್ರಿಕೆಗಳ ಪರೀಕ್ಷೆಗಳು ರದ್ದಾಗಿರುವ ಕಾರಣ ಮಂಡಳಿಯು ತನ್ನ ವೌಲ್ಯ ಮಾಪನ ಯೋಜನೆಯನ್ನು ಪರಿಷ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News