ಬಂಗಾಳ ಬಿಜೆಪಿಯ ಪ್ರಚಾರ ಅಭಿಯಾನದಲ್ಲಿ ಅತ್ಯಾಚಾರದ ಮರು ಸೃಷ್ಟಿ ವಿಡಿಯೋ!

Update: 2020-07-13 09:34 GMT

ಕೊಲ್ಕತ್ತಾ : ಅತ್ಯಾಚಾರ ಘಟನೆಯನ್ನು  ಮರು ಸೃಷ್ಟಿಸಿ ಪ್ರದರ್ಶಿಸುವ ಬಿಜೆಪಿಯ  ಚುನಾವಣಾ ಪ್ರಚಾರಾಭಿಯಾನ ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೊಲ್ಕತ್ತಾ ಪೊಲೀಸರಿಂದ ವರದಿ ಕೇಳಿದೆ. ಈ ಕುರಿತಂತೆ  ಐಟಿ ಸೆಲ್ ತನಿಖೆ ಆರಂಭಿಸಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಮುರಳೀಧರ್ ಶರ್ಮ ಹೇಳಿದ್ದಾರೆ.

ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‍ ನಲ್ಲಿ ಜುಲೈ 9 ಹಾಗೂ 10ರಂದು ಮೂರು ವಿಡಿಯೋಗಳನ್ನು ಪೋಸ್ಟ್ ಮಾಡಿತ್ತು. ಇವುಗಳು ಒಂದು ನಿಮಿಷಕ್ಕೂ ಕಡಿಮೆ ಅವಧಿಯ ವೀಡಿಯೋಗಳಾಗಿದ್ದು, ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಕುರಿತಾಗಿದೆ. ಇವುಗಳ ಪೈಕಿ ಒಂದು ವೀಡಿಯೋದಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳನ್ನು ತೋರಿಸಲಾಗಿದೆಯಾದರೂ ಅವರ ಮುಖಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಬಿರ್ಭುಂ ಜಿಲ್ಲೆಯಲ್ಲಿ ಆ ಅಪ್ರಾಪ್ತ ಮಕ್ಕಳ ತಾಯಿಯ ಮೇಲೆ  ಅತ್ಯಾಚಾರಗೈದು  ತುಂಡಾದ ಬಾಟಲಿಯಿಂದ ಆಕೆಯ ಮೇಲೆ ಹಲ್ಲೆ ನಡೆದಿದೆ ಎಂದು  ಹೇಳಲಾಗಿದೆ. ರಾಜ್ಯದ ಜನರು ಮಹಿಳೆಯರ ವಿರುದ್ಧ ಅಪರಾಧಗಳನ್ನು ಸಹಿಸುವುದಿಲ್ಲ ಎಂದೂ ಅದರಲ್ಲಿ ಹೇಳಲಾಗಿದೆ.

ಈ ನಿರ್ದಿಷ್ಟ ವೀಡಿಯೋ ವಿವಾದಕ್ಕೀಡಾಗಿದ್ದರೂ ಪಕ್ಷ  ಅದನ್ನು ಇನ್ನೂ ತನ್ನ ಟ್ವಿಟರ್ ಹ್ಯಾಂಡಲ್‍ ನಿಂದ ತೆಗೆದು ಹಾಕಿಲ್ಲ. ಈ ರೀತಿಯಾಗಿ ಅಪ್ರಾಪ್ತರನ್ನು ಬಳಸುವುದು ಪೋಕ್ಸೋ ಕಾಯಿದೆ ವಿರುದ್ಧವಾಗಿದೆ ಹಾಗೂ ಬಾಲ ನ್ಯಾಯ ಕಾಯಿದೆಯ ಉಲ್ಲಂಘನೆಯೂ ಆಗಿದೆ ಎಂದು ಹೇಳಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ  ಕೊಲ್ಕತ್ತಾ ಪೊಲೀಸರಿಂದ ವರದಿ ಕೇಳಿದೆ.

ಆಯೋಗ ಏನು ಹೇಳಲಿದೆ ಎಂಬುದರ ಬಗ್ಗೆ ತಮ್ಮ ಪಕ್ಷ ತಲೆಕೆಡಿಸಿಕೊಂಡಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ  ಸಯಂತನ್ ಬಸು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News