ರಾಹುಲ್ ಗಾಂಧಿ ಭೇಟಿಗೆ ನಿರಾಕರಿಸಿದ ಸಚಿನ್ ಪೈಲಟ್ : ಉಲ್ಬಣಗೊಂಡ ಭಿನ್ನಮತ

Update: 2020-07-13 13:24 GMT

ಹೊಸದಿಲ್ಲಿ : ರಾಜಸ್ಥಾನ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಸಚಿನ್ ಪೈಲಟ್ ಅವರು ರಾಹುಲ್  ಗಾಂಧಿಯನ್ನು ಭೇಟಿಯಾಗಲು ನಿರಾಕರಿಸುವುದರೊಂದಿಗೆ ಪಕ್ಷದ ರಾಜ್ಯ ಘಟಕದಲ್ಲಿನ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿದೆ.

ಇಂದು ನಡೆದ ಪಕ್ಷದ ರಾಜಸ್ಥಾನ ಘಟಕದ ಶಾಸಕಾಂಗ ಸಭೆಗೂ ಗೈರು ಹಾಜರಾಗುವ ಮೂಲಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿರುದ್ಧ ಬಹಿರಂಗ ಸಮರ  ಸಾರಿರುವ ಪೈಲಟ್ ಸಂಧಾನ ಮಾತುಕತೆಗಳ ಎಲ್ಲಾ ಪ್ರಯತ್ನಗಳಿಗೆ ತಣ್ಣೀರೆರಚಿದ್ದಾರೆ. ತಮ್ಮನ್ನು ಬೆಂಬಲಿಸುವ 30 ಶಾಸಕರಿದ್ದಾರೆ ಎಂದು ಪೈಲಟ್ ಹೇಳಿಕೊಂಡಿದ್ದರೂ ಅವರ ಬಳಿ 16ಕ್ಕಿಂತ ಹೆಚ್ಚಿನ ಶಾಸಕರ ಬೆಂಬಲವಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ.

ತರುವಾಯ ತಾವು ಬಿಜೆಪಿ ಸೇರುವುದಿಲ್ಲ ಎಂದು ಪೈಲಟ್ ಹೇಳಿದ್ದಾರೆ. ಸದ್ಯ ಮುಖ್ಯಮಂತ್ರಿ ಗೆಹ್ಲೋಟ್ ಬಳಿ 95 ಶಾಸಕರ ಬಲವಿದ್ದು  200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತಕ್ಕೆ ಆರು ಶಾಸಕರ ಕೊರತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News