ಕಾಂಗ್ರೆಸ್‌ನ ಎರಡನೇ ಸಭೆಗೆ ಸಚಿನ್ ಪೈಲಟ್‌ಗೆ ಆಹ್ವಾನ

Update: 2020-07-14 05:21 GMT

ಹೊಸದಿಲ್ಲಿ, ಜು.14: ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಸಚಿನ್ ಪೈಲಟ್‌ಗೆ ಇಂದು ನಡೆಯಲಿರುವ ಎರಡನೇ ಸಭೆಗೆ ಹಾಜರಾಗುವಂತೆ ಕಾಂಗ್ರೆಸ್ ಆಹ್ವಾನ ನೀಡಿದೆ. ಆದರೆ, ಪಕ್ಷದ ಮೇಲೆ ಮುನಿಸಿಕೊಂಡಿರುವ ಉಪ ಮುಖ್ಯಮಂತ್ರಿ ಪೈಲಟ್ ಪಕ್ಷದ ಆಫರ್‌ನ್ನು ತಿರಸ್ಕರಿಸಿದ್ದು, ಸಭೆಯಲ್ಲಿ ಹಾಜರಾಗುವ ಸಾಧ್ಯತೆಯಿಲ್ಲ. ಅವರು ಬಿಜೆಪಿಯೊಂದಿಗೆ ಸಕ್ರಿಯ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೈಲಟ್ ಬಣ ಕಳೆದ ರಾತ್ರಿ ಕನಿಷ್ಟ 16 ಶಾಸಕರು ಒಟ್ಟಿಗೆ ಕುಳಿತು ಚರ್ಚಿಸುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಅಶೋಕ್ ಗೆಹ್ಲೋಟ್ ಜೈಪುರದಲ್ಲಿರುವ ತನ್ನ ನಿವಾಸದಲ್ಲಿ ಶಾಸಕರ ಸಭೆ ನಡೆಸಿದ ಗಂಟೆಗಳ ಬಳಿಕ ಪೈಲಟ್ ಬಣ ಸಭೆ ನಡೆಸಿದೆ.

ಗೆಹ್ಲೋಟ್ ಸೋಮವಾರದ ಸಭೆಗೆ ಎಲ್ಲ 107 ಕಾಂಗ್ರೆಸ್ ಶಾಸಕರು, ಪಕ್ಷೇತರರು ಹಾಗೂ ಇತರ ಪಕ್ಷಗಳ 15 ಶಾಸಕರನ್ನು ಆಹ್ವಾನಿಸಿದ್ದರು. 122 ಶಾಸಕರ ಪೈಕಿ 106 ಶಾಸಕರು ಹಾಜರಾಗಿದ್ದರು ಎಂದು ಕಾಂಗ್ರೆಸ್ ಹೇಳಿದೆ. 200 ಸದಸ್ಯಬಲದ ರಾಜಸ್ಥಾನ ಅಸೆಂಬ್ಲಿಯಲ್ಲಿ ಕಾಂಗ್ರೆಸ್ 107 ಶಾಸಕರನ್ನು ಹೊಂದಿದ್ದು, 13 ಪಕ್ಷೇತರರು ಹಾಗೂ ಐದು ಸಣ್ಣ ಪಕ್ಷಗಳ ಬೆಂಬಲವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News