ದಿಲ್ಲಿಯಲ್ಲಿ 1 ಸಾವಿರಕ್ಕಿಂತ ಕೆಳಗಿಳಿದ ಕೊರೋನ ಪ್ರಕರಣ

Update: 2020-07-14 06:42 GMT

ಹೊಸದಿಲ್ಲಿ, ಜು.14: ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಕಾಯಿಲೆಯ ಬೆಳವಣಿಗೆಯಲ್ಲಿ ಪ್ರಮುಖ ತಿರುವು ಲಭಿಸಿದ್ದು, ಜೂನ್ 1ರ ಬಳಿಕ ಮೊದಲ ಬಾರಿ ಸೋಮವಾರದಂದು ಹೊಸ ಸೋಂಕಿತರ ಸಂಖ್ಯೆ 1,000ಕ್ಕಿಂತ ಕಡಿಮೆ ಪತ್ತೆಯಾಗಿದೆ.

ಕಳೆದ ಎರಡು ವಾರಗಳಲ್ಲಿ ದಿಲ್ಲಿಯಲ್ಲಿ ಕೊರೋನ ವೈರಸ್ ಪರಿಸ್ಥಿತಿಯಲ್ಲಿ ಗಮನಾರ್ಹ ಪ್ರಗತಿಯಾಗಿದೆ. ಜೂನ್ 23ರಿಂದ ದಿಲ್ಲಿಯಲ್ಲಿ ಪ್ರತಿದಿನ 3,947 ಹೊಸ ಪ್ರಕರಣಗಳು ವರದಿಯಾಗಿದ್ದವು, ಇದೀಗ ದೈನಂದಿನ ಪ್ರಕರಣಗಳು ನಿಧಾನವಾಗಿ ಕಡಿಮೆಯಾಗುತ್ತಿದೆ. ದಿಲ್ಲಿಯು ಪ್ರತಿ ದಿನ ಸುಮಾರು ಆರು ಶೇಕಡ ಪ್ರಕರಣ ದಾಖಲಾಗುವುದರೊಂದಿಗೆ ದಿಲ್ಲಿ ಅತ್ಯಂತ ಹೆಚ್ಚು ಸೋಂಕು ಪೀಡಿತ ರಾಜ್ಯದಲ್ಲಿ ಒಂದಾಗಿತ್ತು. ಇದೀಗ ಸೋಂಕಿತ ಬೆಳವಣಿಗೆಯ ದರ 1.7ಕ್ಕೆ ಕುಸಿದಿದೆ.

ಪರೀಕ್ಷೆಗಳ ಸಂಖ್ಯೆಯ ಹೆಚ್ಚು ಮಾಡಿದ ಬಳಿಕ ಈ ಬೆಳವಣಿಗೆ ನಡೆದಿರುವುದು ಖುಷಿಯ ವಿಚಾರವಾಗಿದೆ. ಕಳೆದ ಎರಡು ವಾರಗಳಲ್ಲಿ ಸೋಂಕಿತರ ಸಂಖ್ಯೆ ನಿಧಾನಗತಿಯಲ್ಲಿದ್ದು, ದಿಲ್ಲಿಯಲ್ಲೀಗ ಪ್ರತಿದಿನ 20,000ರಿಂದ 25,000 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗುತ್ತಿದೆ. ಇದೀಗ ರಾಜ್ಯದಲ್ಲಿ ಮೊದಲಿಗಿಂತ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ.

  ದಿಲ್ಲಿಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಲು ಕೊರೋನ ಟೆಸ್ಟಿಂಗ್ ಹೆಚ್ಚಳವು ಪ್ರಮುಖ ಕಾರಣವಾಗಿದೆ. ಒಂದು ತಿಂಗಳಿಂದ ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡಲಾಗಿತ್ತು. ಆಗ ನಗರದಲ್ಲಿ ಪ್ರತಿ ದಿನ ಸುಮಾರು 5,000 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗುತ್ತಿತ್ತು. ವೈರಸ್ ಪತ್ತೆಯಾಗುವ ಜನರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿತ್ತು. 10 ದಿನಗಳಲ್ಲಿ ಪ್ರತಿದಿನ 2,000 ಹಾಗೂ 3500 ಪ್ರಕರಣಗಳು ಪತ್ತೆಯಾಗಿತ್ತು. ಆಗ ಮಹಾರಾಷ್ಟ್ರದಲ್ಲಿ ಮಾತ್ರ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಆಗ ಮುಂಬೈಯನ್ನು ಹಿಂದಿಕ್ಕಿದ ದಿಲ್ಲಿ ದೇಶದಲ್ಲಿ ಗರಿಷ್ಟ ಪ್ರಕರಣ ಪತ್ತೆಯಾಗುತ್ತಿದ್ದ ರಾಜ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News