ಉಳ್ಳಾಲ ಸಭಾ ವ್ಯಾಪ್ತಿಯಲ್ಲಿ ಮಂಗಳವಾರ 11 ಮಂದಿಗೆ ಕೊರೋನ ಪಾಸಿಟಿವ್

Update: 2020-07-14 18:43 GMT

ಉಳ್ಳಾಲ: ಇಲ್ಲಿನ ನಗರ ಸಭಾ ವ್ಯಾಪ್ತಿಯಲ್ಲಿ ಮಂಗಳವಾರ ಎಂಟು ವರ್ಷದ ಬಾಲಕ ಸೇರಿದಂತೆ ಒಟ್ಟು 11ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 11  ಮಂದಿಯ ಪೈಕಿ 22, 23 ವರ್ಷದ ಇಬ್ಬರು ಯುವತಿಯರು, ಓರ್ವ ಮಹಿಳೆ ಕೂಡಾ ಇದ್ದಾರೆ.

ಅಕ್ಕರೆಕೆರೆಯಲ್ಲಿ 53, 39 ವರ್ಷದ ಇಬ್ಬರು ಪುರುಷರು, 20,16,18 ವರ್ಷದ ಯುವಕರು, 23 ವರ್ಷದ ಯುವತಿ ಹಾಗೂ 35 ವರ್ಷದ ಮಹಿಳೆಗೆ ಕೊರೋನ ಇರುವುದು ದೃಢಪಟ್ಟಿದ್ದು, ಇವರಲ್ಲಿ 20,16,18 ವರ್ಷದ ಯುವಕರು ಹಾಗೂ 53 ವರ್ಷದ ಪುರುಷ ಒಂದೇ ಕುಟುಂಬದ ಸದಸ್ಯರಾಗಿದ್ದಾರೆ.

ಉಳ್ಳಾಲದಲ್ಲಿ 8 ವರ್ಷದ ಬಾಲಕ, ಆಝಾದ್ ನಗರದಲ್ಲಿ14ವರ್ಷದ ಯುವಕ, 40 ವರ್ಷದ ಪುರುಷ, ಪಂಡಿತ್ ಹೌಸ್ ನಲ್ಲಿ 46 ವರ್ಷದ ಮಹಿಳೆಗೆ  ಕೊರೋನ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋಟೆಕಾರು: ಮೂರು ಪ್ರಕರಣ

ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಲ್ಯದಲ್ಲಿ 24 ವರ್ಷದ ಮಹಿಳೆ, ಕುಂಪಲದಲ್ಲಿ 20 ವರ್ಷದ ಯುವಕ ಮತ್ತು ಖಾಸಗಿ ಆಸ್ಪತ್ರೆಯಲ್ಲಿ 29 ವರ್ಷದ ಯುವಕನಿಗೆ ಕೊರೋನ ಸೋಂಕು ದೃಢಪಟ್ಟಿದೆ.

‌ಉಳಿದಂತೆ ಮುನ್ನೂರು ಗ್ರಾಮದ ಮದನಿ ನಗರ ನಿವಾಸಿ 24 ವರ್ಷದ ಮಹಿಳೆ, ಕಿನ್ಯ ಗ್ರಾಮದ 22 ವರ್ಷದ ಯುವತಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದರಿಂದ ಜೂ.23 ರಿಂದ ಈವರೆಗೆ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 284 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News