ಶಿರೂರು ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜಿಗೆ ಸತತ 11ನೇ ಬಾರಿ 100 ಶೇ. ಫಲಿತಾಂಶ

Update: 2020-07-15 05:37 GMT

ಉಡುಪಿ, ಜು.15: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶಿರೂರು ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜು ಸತತ 11ನೇ ಬಾರಿ 100 ಶೇ. ಫಲಿತಾಂಶ ದಾಖಲಿಸಿದೆ.

ಕಾಲೇಜಿನಿಂದ ಪರೀಕ್ಷೆ ಬರೆದ 52 ವಿದ್ಯಾರ್ಥಿಗಳ ಪೈಕಿ 28 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 24 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಆಯಿಶಾ ಝೇಬಾ 576(96 ಶೇ.) ಅಂಕಗಳೊಂದಿಗೆ ಕಾಲೇಜಿಗೆ ಅಗ್ರಸ್ಥಾನಿಯಾಗಿದ್ದಾರೆ. ಈಕೆ ಬಿಸಿನೆಸ್ ಸ್ಟಡೀಸ್‌ನಲ್ಲಿ 100ರಲ್ಲಿ 100 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿನಿ ಮೌಲಾನ ಅಸ್ಮಿಯಾ 542(90.33 ಶೇ.) ಅಂಕಗಳೊಂದಿಗೆ ದ್ವಿತೀಯ ಹಾಗೂ ಕಸ್ಮಾ ಬೀಬಿ ನುಝೈಫಾ 536(89.33 ಶೇ.) ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಈಕೆ ಕಂಪ್ಯೂಟರ್ ಸಯನ್ಸ್ ವಿಷಯದಲ್ಲಿ 100ರಲ್ಲಿ 100 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಫಾತಿಮಾ 567(94.50 ಶೇ.) ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದು, ಗಣಿತದಲ್ಲಿ 100ರಲ್ಲಿ 100 ಅಂಕ ಪಡೆದಿದ್ದಾರೆ. ಮರಿಯಮ್ ಇನಾಯತುಲ್ಲಾ 557(92.83 ಶೇ.) ಅಂಕಗಳೊಂದಿಗೆ ದ್ವಿತೀಯ ಹಾಗೂ 556(92.67 ಶೇ.) ಅಂಕಗಳನ್ನು ಗಳಿಸಿರುವ ಅಫ್ಝಲ್ ಶರೀಫ್ ತೃತೀಯ ಸ್ಥಾನ ಗಳಿಸಿದ್ದಾರೆ.

ಉಳಿದಂತೆ ಫಾತಿಮಾ, ಫಿಝಾ, ರುಕ್ನುದ್ದೀನ್ ಎಸ್ಸಾ ಫೈಝಲ್ ಗಣಿತದಲ್ಲಿ 100 ಶೇ. ಅಂಕ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News