ಉಡುಪಿ ನಗರಸಭೆಯ ಇಬ್ಬರು ಮಹಿಳಾ ಸದಸ್ಯೆಯರಿಗೆ ಕೊರೋನ ಸೋಂಕು

Update: 2020-07-15 07:01 GMT

ಉಡುಪಿ, ಜು.15: ಉಡುಪಿ ನಗರಸಭೆಯ ಇಬ್ಬರು ಮಹಿಳಾ ಸದಸ್ಯೆಯ ರಿಗೆ ಕೊರೋನ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ.

ಅನಾರೋಗ್ಯದ ಕಾರಣಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಸದಸ್ಯೆಯನ್ನು ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್-19 ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈ ಇಬ್ಬರು ಸದಸ್ಯರು ಕೆಲವು ದಿನಗಳ ಹಿಂದೆ ನಗರಸಭೆ ಕಚೇರಿ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಜು.14ರಂದು ನಗರಸಭೆ ಆರೋಗ್ಯ ನಿರೀಕ್ಷಕರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ವಾರಗಳ ಹಿಂದೆ ಮಲ್ಪೆಯ ನಗರಸಭೆ ಸದಸ್ಯರೊಬ್ಬರಿಗೂ ಕೊರೋನ ಪಾಸಿಟಿವ್ ಬಂದಿತ್ತು. ಈ ಎಲ್ಲ ಬೆಳವಣಿಗೆಯಿಂದ ನಗರಸಭೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಅಧಿಕಾರಿ ಹಾಗೂ ಭೇಟಿ ನೀಡಿದ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News