ಸಿಬಿಎಸ್ಇ 10ನೆ ತರಗತಿ ಫಲಿತಾಂಶ ಪ್ರಕಟ

Update: 2020-07-15 14:46 GMT

ಹೊಸದಿಲ್ಲಿ, ಜು. 15: ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು ಬುಧವಾರ ಪ್ರಕಟಿಸಿದೆ. ಸಿಬಿಎಸ್ಇ 10ನೇ ತರಗತಿಯ ಫಲಿತಾಂಶ ಸಿಬಿಎಸ್ಇಯ ಅಧಿಕೃತ ವೆಬ್ ಸೈಟ್  cbse.nic.in cbseresults.nic.in. ಹಾಗೂ ನಲ್ಲಿ ಲಭ್ಯವಾಗಲಿದೆ.


ಈ ವರ್ಷ 18 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ಶೇ. 91.46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ವರ್ಷ ಕಳೆದ ವರ್ಷಕ್ಕಿಂತ ಶೇ. 0.36 ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2019ರಲ್ಲಿ ಒಟ್ಟು ಶೇ. 91.10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ವರ್ಷ ಶೇ. 90.14 ಬಾಲಕರು ಉತ್ತೀರ್ಣರಾಗಿದ್ದು, ಶೇ. 93.31 ಬಾಲಕಿಯರು ಉತ್ತೀರ್ಣರಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ. 
ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 2.23 ಅಥವಾ 41,804 ವಿದ್ಯಾರ್ಥಿಗಳು ಶೇ. 95ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ದೇಶದಲ್ಲಿ ತಿರುವನಂತಪುರ ಜಿಲ್ಲೆ ಉತ್ತಮ ಸಾಧನೆ ತೋರಿದೆ. ಈ ಜಿಲ್ಲೆಯಲ್ಲಿ ಶೇ. 99.28 ಫಲಿತಾಂಶ ದಾಖಲಾಗಿದೆ. ಅನಂತರದ ಸ್ಥಾನವನ್ನು ಶೇ. 98.95 ಫಲಿತಾಂಶ ದಾಖಲಿಸಿದ ಚೆನ್ನೈ ಹಾಗೂ ಶೇ. 98.23 ಫಲಿತಾಂಶ ದಾಖಲಿಸಿದ ಬೆಂಗಳೂರು ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News