ಆಲ್ಕೋಹಾಲ್ ಇರುವ ಹ್ಯಾಂಡ್ ಸ್ಯಾನಿಟೈಸರ್ ಮೇಲೆ ಶೇ.18 ಜಿಎಸ್‍ಟಿ

Update: 2020-07-15 11:25 GMT

ಹೊಸದಿಲ್ಲಿ:  ಎಲ್ಲಾ ಆಲ್ಕೋಹಾಲ್ ಆಧರಿತ ಹ್ಯಾಂಡ್ ಸ್ಯಾನಿಟೈಸರ್ ಗಳ  ಮೇಲೆ ಶೇ 18ರಷ್ಟು ಜಿಎಸ್‍ ಟಿ ಅನ್ವಯವಾಗುತ್ತದೆ ಎಂದು ದಿ ಅಥಾರಿಟಿ ಫಾರ್ ಅಡ್ವಾನ್ಸ್ಡ್ ರೂಲಿಂಗ್  ಹೇಳಿದೆ.

ಗ್ರಾಹಕ ವ್ಯವಹಾರಗಳ ಸಚಿವಾಲಯ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಅಗತ್ಯ ವಸ್ತು ಎಂದು ಪರಿಗಣಿಸಿರುವುದರಿಂದ ತನ್ನ ಉತ್ಪನ್ನಕ್ಕೆ ಜಿಎಸ್‍ ಟಿಯಿಂದ ವಿನಾಯಿತಿ ನೀಡಲಾಗುವುದೇ ಎಂದು ಕೇಳಿ ಸ್ಪ್ರಿಂಗ್ ಫೀಲ್ಡ್ ಇಂಡಿಯಾ ಡಿಸ್ಟಿಲ್ಲರೀಸ್ ಎಎಆರ್ ನ  ಗೋವಾ ಪೀಠದ  ಮೆಟ್ಟಿಲೇರಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಾಧಿಕಾರ ಮೇಲಿನ ಉತ್ತರ ನೀಡಿದೆ.

ಸಂಸ್ಥೆ ಉತ್ಪಾದಿಸುವ ಹ್ಯಾಂಡ್ ಸ್ಯಾನಿಟೈಸರ್ ಗಳು  ಆಲ್ಕೋಹಾಲ್ ಬೇಸ್ಡ್ ಸ್ಯಾನಿಟೈಸರ್ಸ್ ವಿಭಾಗದಲ್ಲಿ ಬರುವುದರಿಂದ ಹಾಗೂ  ಎಚ್‍ಎಸ್‍ಎನ್ ವಿಭಾಗದ 3808 ಅಡಿಯಲ್ಲಿ ಅದು ಬರುವುದರಿಂದ ಶೇ 18ರ ಜಿಎಸ್‍ಟಿ ಅನ್ವಯವಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು  ಅಗತ್ಯ ವಸ್ತು ಎಂದು ಪರಿಗಣಿಸಿದ್ದರೂ ಜಿಎಸ್‍ಟಿ ಕಾನೂನಿನಡಿ ವಿನಾಯಿತಿಯಿರುವ ಉತ್ಪನ್ನಗಳ ಪ್ರತ್ಯೇಕ ಪಟ್ಟಿಯಿದೆ ಎಂದು ಪ್ರಾಧಿಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News