ಎಲ್ಲಾ ವಿಷಯಗಳಲ್ಲೂ ಒಂದೇ ರೀತಿ ಅಂಕಗಳನ್ನು ಗಳಿಸಿದ ಅವಳಿ ಸಹೋದರಿಯರು!

Update: 2020-07-15 18:26 GMT

ನೊಯ್ಡಾ: ನೋಡಲು ಒಂದೇ ರೀತಿ ಕಾಣುವ ಅವಳಿ ಸಹೋದರಿಯರಿಬ್ಬರು ಸಿಬಿಎಸ್ ಇ 12ನೆ ತರಗತಿ ಪರೀಕ್ಷೆಗಳಲ್ಲಿ ಒಂದೇ ರೀತಿಯ ಅಂಕಗಳನ್ನು ಗಳಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಇಬ್ಬರೂ ಸಹೋದರಿಯರು 95.8 ಶೇ. ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.

ನೊಯ್ಡಾದ ಏಸ್ಟರ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿಯರಾದ ಮಾನಸಿ ಮತ್ತು ಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ 98, ಫಿಸಿಕ್ಸ್ , ಕೆಮಿಸ್ಟ್ರಿ ಮತ್ತು ಫಿಸಿಕಲ್ ಎಜುಕೇಶನ್ ನಲ್ಲಿ 95 ಅಂಕಗಳನ್ನು ಗಳಿಸಿದ್ದಾರೆ.

“ಎಲ್ಲರೂ ನಮ್ಮನ್ನು ಅವಳಿಗಳೆಂದು ಅಚ್ಚರಿಯಿಂದ ನೋಡುತ್ತಾರೆ. ಉತ್ತಮ ಅಂಕಗಳನ್ನು ಗಳಿಸುತ್ತೇವೆ ಎನ್ನುವುದು ಇಬ್ಬರಿಗೂ ಗೊತ್ತಿತ್ತು. ಆದರೆ ಒಂದೇ ರೀತಿಯ ಅಂಕಗಳನ್ನು ಊಹಿಸಿರಲಿಲ್ಲ” ಎಂದು ಮಾನಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News