ಮೂವರು ಸಿಬ್ಬಂದಿಗೆ ಕೊರೋನ ದೃಢ: ಬೈಂದೂರು ಪೊಲೀಸ್ ಠಾಣೆ ಎರಡನೇ ಬಾರಿ ಸೀಲ್‍ಡೌನ್

Update: 2020-07-16 04:52 GMT
ಸಾಂದರ್ಭಿಕ ಚಿತ್ರ

ಬೈಂದೂರು, ಜು.16: ಎ.ಎಸ್.ಐ ಸಹಿತ ಮೂವರು ಸಿಬ್ಬಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಬೈಂದೂರು ಪೊಲೀಸ್ ಠಾಣೆಯನ್ನು ಎರಡನೇ ಬಾರಿ ಸೀಲ್ ಡೌನ್ ಮಾಡಲಾಗುತ್ತಿದೆ.

ಕೊರೋನ ದೃಢಪಟ್ಟ ಎಎಸ್ಐ, ಮಹಿಳಾ ಪೊಲೀಸ್ ಹೋಂ ಗಾರ್ಡ್ ಸೇರಿ ಮೂವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದಕ್ಕೂ ಮೊದಲು ಕೆಲ ತಿಂಗಳ ಹಿಂದೆ ಸಿಬ್ಬಂದಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ಬಳಿಕ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಎಸ್ಐ ಸಹಿತ ಹಲವರು ಕ್ವಾರಂಟೈನ್ ಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News