ಉಡುಪಿ ಜಿಲ್ಲೆಯ ಗಡಿಗಳು ಸೀಲ್‌ಡೌನ್: ಖಾಸಗಿ, ಸರಕಾರಿ ಬಸ್ ಸಂಚಾರ ಸ್ಥಗಿತ

Update: 2020-07-16 06:40 GMT

ಉಡುಪಿ, ಜು.16: ಕೊರೋನ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಉಡುಪಿ ಜಿಲ್ಲೆಯ ಎಲ್ಲ 10 ಗಡಿಗಳ ಸೀಲ್‌ಡೌನ್ ಜೊತೆ, ಎಲ್ಲ ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರ ಸ್ಥಗಿತ ಗೊಳಿಸಲಾಗಿದೆ. ಬಸ್ ವ್ಯವಸ್ಥೆ ಇಲ್ಲದೆ ಉಡುಪಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನ ಸಂಚಾರ ತೀರ ವಿರಳವಾಗಿತ್ತು.

ಉಡುಪಿ ಸರ್ವಿಸ್, ಸಿಟಿ ಹಾಗೂ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣಗಳು ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಎಲ್ಲ ಅಂಗಡಿಮುಗ್ಗಟ್ಟುಗಳು ಸಾಮಾನ್ಯ ದಿನಗಳಂತೆ ತೆರೆದಿದ್ದವು. ಸರಕಾರಿ ಕಚೇರಿಗಳು ಸೇರಿದಂತೆ ಎಲ್ಲ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ಖಾಸಗಿ ವಾಹನಗಳಲ್ಲಿ ನಗರಕ್ಕೆ ಬರುತ್ತಿರುವುದು ಕಂಡಬಂತು.

ಹೆಜಮಾಡಿ, ಶಿರೂರು, ಸೋಮೇಶ್ವರ, ಕೊಲ್ಲೂರು, ಮಾಳ ಸೇರಿದಂತೆ ಜಿಲ್ಲೆಯ ಎಲ್ಲ ಪ್ರಮುಖ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಸೀಲ್ ಮಾಡ ಲಾಗಿದೆ. ಪ್ರತಿ ವಾಹನಗಳನ್ನು ತಪಾಸಣೆ ನಡೆಸಲಗುತ್ತಿದೆ. ಸರಕು ವಾಹನಗಳು ಮತ್ತು ತುರ್ತು ಅಗತ್ಯಕ್ಕೆ ಮಾತ್ರ ಜಿಲ್ಲೆಯ ಒಳಗೆ ಮತ್ತು ಹೊರಗೆ ಹೋಗಲು ಅವಕಾಶ ನೀಡಲಾಗುತ್ತಿದೆ. ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News