ಪುತ್ತೂರು: ಮೂವರು ಪೊಲೀಸ್ ಸಿಬ್ಬಂದಿ ಸೇರಿ 9 ಮಂದಿಗೆ ಕೊರೋನ ಪಾಸಿಟಿವ್

Update: 2020-07-16 07:03 GMT
ಸಾಂದರ್ಭಿಕ ಚಿತ್ರ

ಪುತ್ತೂರು, ಜು.16: ನಗರ ಮಹಿಳಾ ಪೊಲೀಸ್ ಠಾಣೆಯ ಜೀಪು ಚಾಲಕ, 27 ವರ್ಷದ ನಗರ ಪೊಲೀಸ್ ಠಾಣೆಯ ಸಿಬ್ಬಂದಿ, 23 ವರ್ಷದ ಅದೇ ಠಾಣೆಯ ಇನ್ನೋರ್ವ ಮಹಿಳಾ ಸಿಬ್ಬಂದಿ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ‌ಒಟ್ಟು 9 ಪ್ರಕರಣಗಳು ಗುರುವಾರ ವರದಿಯಾಗಿದೆ.

ಪೊಲೀಸರಲ್ಲಿ ಪತ್ತೆಯಾದ 3 ಪಾಸಿಟಿವ್ ‌ಪ್ರಕರಣಗಳು ಪ್ರಾಥಮಿಕ ಸಂಪರ್ಕ ದಿಂದ ಉಂಟಾಗಿದೆ. ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿಯ 32 ವರ್ಷದ ಮಹಿಳಾ ಸಿಬ್ಬಂದಿ, ಕಬಕ ಗ್ರಾಪಂ ವ್ಯಾಪ್ತಿಯ ಮುರ ನಿವಾಸಿ 63 ವರ್ಷದ ಮಹಿಳೆ, 23 ವರ್ಷದ ಉಪ್ಪಿನಂಗಡಿ ಹಳೆ ಬಸ್ಸು ನಿಲ್ದಾಣದ ಬಳಿ ಯ ನಿವಾಸಿ ಯುವಕ, ಪುತ್ತೂರು ಪುರಸಭಾ ವ್ಯಾಪ್ತಿಯ ಪಡೀಲು ನಿವಾಸಿ 29 ವರ್ಷದ ಮಹಿಳೆಯಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ಕಡಬ ತಾಲೂಕಿನಲ್ಲಿ ಮಸ್ಕತ್ ನಿಂದ ಜು. 12ರಂದು ಆಗಮಿಸಿದ  ಕೋಡಿಂಬಾಳ ನಿವಾಸಿ  59 ವರ್ಷ ಪ್ರಾಯದ ವ್ಯಕ್ತಿ ಹಾಗೂ 6 ವರ್ಷದ ಅವರ ಪುತ್ರನಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಇವರು ಈಗಾಗಲೇ ಕ್ವಾರಂಟೈನ್ ನಲ್ಲಿದ್ದಾರೆ.

ಜು.14ರಂದು ಕಬಕ ಗ್ರಾಪಂ ವ್ಯಾಪ್ತಿಯ ಮುರ ನಿವಾಸಿ ಮಹಿಳೆ ಊರಿಗೆ ಆಗಮಿಸಿದ್ದು, ಈಗಾಗಲೇ ಮಂಗಳೂರು ಆಸ್ಪತ್ರೆಯ ಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದಾರೆ. ಪಡೀಲು ನಿವಾಸಿ ಮಹಿಳೆ ಪುತ್ತೂರು ಸರ್ಕಾರಿ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್ ಸಿಬ್ಬಂದಿ ಸೇರಿದಂತೆ ಉಳಿದವರು ಸುಬ್ರಹ್ಮಣ್ಯದಲ್ಲಿ ಸಿದ್ದಪಡಿಸಲಾಗಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪುತ್ತೂರು ‌ಮತ್ತು ಕಡಬ ತಾಲೂಕಿನಲ್ಲಿ ಈ ತನಕ ಒಟ್ಟು 67 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News