ಪುಟ್ಟ ಸೋದರಿಯನ್ನು ನಾಯಿ ದಾಳಿಯಿಂದ ರಕ್ಷಿಸಿದ ಪೋರನ ಮುಖಕ್ಕೆ 90ಕ್ಕೂ ಹೆಚ್ಚು ಹೊಲಿಗೆ!

Update: 2020-07-16 12:38 GMT

ನ್ಯೂಯಾರ್ಕ್: ತನ್ನ ನಾಲ್ಕು ವರ್ಷದ ತಂಗಿಯ ಮೇಲೆ ಜರ್ಮನ್ ಶೆಪರ್ಡ್ ನಾಯಿಯೊಂದು ದಾಳಿ ನಡೆಸುತ್ತಿರುವುದನ್ನು ನೋಡಿದ ತಕ್ಷಣ ಧಾವಿಸಿ ತಂಗಿಯನ್ನು ರಕ್ಷಿಸಿ ಗಂಭೀರವಾಗಿ ಗಾಯಗೊಂಡ 6 ವರ್ಷದ ಬಾಲಕನಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಬ್ರಿಡ್ಜರ್ ವಾಕರ್ ಎಂಬ ಈ ಬಾಲಕನ ಸಾಹಸವನ್ನು ಅವೆಂಜರ್ಸ್ ಖ್ಯಾತಿಯ ನಟಿ ಅನ್ನಾ ಹಾತ್ವೇ ಅವರು ಕೊಂಡಾಡಿ ಇನ್‍ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

``ನಾನು ಅವೆಂಜರ್ ಅಲ್ಲ, ಆದರೆ ಯಾರು ಸೂಪರ್ ಹೀರೋ ಎಂಬುದು ಒಬ್ಬರನ್ನು ನೋಡಿದಾಗ ತಿಳಿಯುತ್ತದೆ. ಬ್ರಿಡ್ಜರ್ ನೀನು ತೋರಿಸಿದ ಧೈರ್ಯದ ಅರ್ಧದಷ್ಟು ಧೈರ್ಯ ನನಗಿರಬಹುದೆಂದು ಆಶಿಸುತ್ತೇನೆ. ಆದಷ್ಟು ಬೇಗ ಗುಣಮುಖನಾಗು'' ಎಂದು ಆಕೆ ಬರೆದಿದ್ದಾರೆ.

ನಾಯಿ  ಬ್ರಿಡ್ಜರ್ ಮೇಲೆರಗಿದ್ದರಿಂದ ಆತನ ಮುಖಕ್ಕಾದ ಗಾಯಗಳಿಗೆ ವೈದ್ಯರು ಶಸ್ತ್ರಕ್ರಿಯೆ ನಡೆಸಿ 90 ಹೊಲಿಗೆಗಳನ್ನು ಹಾಕಿದ್ದಾರೆ.  ಘಟನೆಯ ನಂತರ ಆತನ ಸಂಬಂಧಿಯೊಬ್ಬರು ಒಂದು ಇನ್‍ ಸ್ಟಾಗ್ರಾಂ ಪುಟ ಆರಂಭಿಸಿ ಆತ ಅವೆಂಜರ್ಸ್ ಅಭಿಮಾನಿ ಎಂದಿದ್ದು ಅನ್ನಾ ಅವರ ಗಮನಕ್ಕೆ ಬಂದು ಅವರು ಪೋಸ್ಟ್ ಮಾಡಲು ಕಾರಣವಾಗಿದೆ.

ನಾಯಿ ತಂಗಿಯತ್ತ ಧಾವಿಸುತ್ತಿದ್ದಾಗ ಏಕೆ ಮಧ್ಯ ಪ್ರವೇಶಿಸಿದೆ ಎಂದು ಆತನನ್ನು ಕೇಳಿದಾಗ ``ಯಾರಾದರೂ ಸಾಯುವುದಿದ್ದರೆ ಅದು ನಾನು ಎಂದು ಅಂದುಕೊಂಡೆ,'' ಎಂದು ಆತ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News