ಇಡೀ ವಿಶ್ವಕ್ಕೆ ಕೊರೋನ ಔಷಧ ಉತ್ಪಾದಿಸುವ ಸಾಮರ್ಥ್ಯ ಭಾರತದ ಔಷಧ ಉದ್ದಿಮೆಗೆ ಇದೆ: ಬಿಲ್ ಗೇಟ್ಸ್

Update: 2020-07-16 15:38 GMT
ಫೈಲ್ ಚಿತ್ರ

ಹೊಸದಿಲ್ಲಿ, ಜು. 16: ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಕೊರೋನ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಭಾರತದ ಔಷಧ ಉದ್ದಿಮೆಗೆ ಇದೆ ಎಂದು ಮೈಕ್ರೋಸಾಫ್ಟ್ ನ ಸಹ-ಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ. 

ಭಾರತದಲ್ಲಿ ಹಲವು ಮಹತ್ವದ ಸಂಗತಿಗಳು ನಡೆದಿವೆ. ಭಾರತ ಇತರ ರೋಗಗಳಿಗೂ ಬಳಸುವ ಸಾಮರ್ಥ್ಯ ಹೊಂದಿರುವ ಕೊರೋನ ಲಸಿಕೆಯನ್ನು ಸಂಶೋಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಬಿಲ್ ಹಾಗೂ ಮಿಲಿಂಡಾ ಗೇಟ್ಸ್ ಫೌಂಡೇಶನ್ ಉಪಾಧ್ಯಕ್ಷ ಹಾಗೂ ಟ್ರಸ್ಟಿ ಬಿಲ್ ಗೇಟ್ಸ್ ಹೇಳಿದ್ದಾರೆ.

ಡಿಸ್ಕವರಿ ಪ್ಲಸ್ ಚಾನೆಲ್ ನಲ್ಲಿ ಗುರುವಾರ ಪ್ರಸಾರವಾದ ‘ಕೋವಿಡ್-19: ಇಂಡಿಯಾಸ್ ವಾರ್ ಎಗೈನ್ಸ್ಟ್ ದಿ ವೈರಸ್’ ಸಾಕ್ಷಚಿತ್ರದಲ್ಲಿ ಮಾತನಾಡಿದ ಬಿಲ್ ಗೇಟ್ಸ್, ಭಾರತದಲ್ಲಿ ಅತ್ಯಧಿಕ ಜನಸಂಖ್ಯೆ ಹಾಗೂ ನಗರಗಳಲ್ಲಿ ಅತಿ ಹೆಚ್ಚು ಜನ ಸಾಂದ್ರತೆ ಇರುವುದರಿಂದ ಈ ಅತಿ ದೊಡ್ಡ ಆರೋಗ್ಯ ಸಮಸ್ಯೆಯನ್ನು ಭಾರತ ಕೂಡ ಎದುರಿಸುತ್ತಿದೆ ಎಂದರು. ಭಾರತದ ಔಷಧ ಉದ್ದಿಮೆ ಸಾಮರ್ಥ್ಯವನ್ನು ಶ್ಲಾಘಿಸಿದ ಅವರು, ಭಾರತದ ಕಂಪೆನಿಗಳು ಇಡಿ ವಿಶ್ವಕ್ಕೆ ದೊಡ್ಡ ಪ್ರಮಾಣದಲ್ಲಿ ಔಷಧ ಹಾಗೂ ಲಸಿಕೆಯನ್ನು ಪೂರೈಸುತ್ತಿರುವುದರಿಂದ ಕೊರೋನಾಕ್ಕೆ ಔಷಧ ಪೂರೈಸಲು ಭಾರತಕ್ಕೆ ಸಾಕಷ್ಟು ಸಾಮರ್ಥ್ಯ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News